ವಿಕಲಚೇತನರಿಗೆ ಕ್ರೀಡಾ ಸ್ಪರ್ಧೆ

ದಾವಣಗೆರೆ, ನ.20- ವಿಶ್ವ ವಿಕಲಚೇತನರ ದಿನಾಚರಣೆ ಪ್ರಯುಕ್ತ ನಾಡಿದ್ದು ದಿನಾಂಕ 23 ರ ಗುರುವಾರ ಬೆಳಿಗ್ಗೆ 11 ಗಂಟೆಗೆ ನಗರದ ಮೋತಿ ವೀರಪ್ಪ ಕಾಲೇಜು ಮೈದಾನದಲ್ಲಿ ವಿಕಲಚೇತನರಿಗಾಗಿ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.

ಮಹಿಳಾ ಮತ್ತು ಪುರುಷ ವಿಕಲಚೇತನರಿಗೆ ಪ್ರತ್ಯೇಕವಾಗಿ ಸ್ಪರ್ಧೆಗಳನ್ನು ನಡೆಸಲಾಗುತ್ತಿದ್ದು, ಕ್ರೀಡಾ ಸ್ಪರ್ಧೆಯಲ್ಲಿ ದೈಹಿಕ ವಿಕಲಚೇತನರಿಗೆ ನಿಧಾನಗತಿ ಬೈಕ್ ರೇಸ್, ಶಾಟ್‍ಪುಟ್, ಜಾವಲಿನ್ ಥ್ರೋ, ಮ್ಯೂಸಿಕಲ್ ಚೇರ್, ಸಂಪೂರ್ಣ ದೃಷ್ಟಿದೋಷವುಳ್ಳವರಿಗೆ 50 ಮೀ. ರನ್ನಿಂಗ್ ರೇಸ್, ಶಾಟ್‍ಪುಟ್, ಮ್ಯೂಸಿಕಲ್ ಚೇರ್, ಚೆಸ್, ಕೇರಂ ವಾಕ್ ಮತ್ತು ಶ್ರವಣದೋಷವುಳ್ಳವರಿಗೆ 100ಮೀ ರನ್ನಿಂಗ್ ರೇಸ್, ಜಾವಲಿನ್ ಥ್ರೋ, ಶಾಟ್‍ಪುಟ್, ಕೇರಂ, ಚೆಸ್ ಬೆನ್ನುಹುರಿ ಅಪಘಾತ ಹೊಂದಿರುವವರಿಗೆ ಚೆಸ್, ಕೇರಂ ಮತ್ತು ವ್ಹೀಲ್‍ಚೇರ್ ರೇಸ್ ಕ್ರೀಡೆಗಳನ್ನು ಆಯೋಜಿಸಲಾಗಿದೆ.

ಆಸಕ್ತ ವಿಕಲಚೇತನರು ಆಯಾ ತಾಲ್ಲೂಕು ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರಾದ ಕೆ.ಎಂ.ಶೈಲಜಾ (9886366809) (ಹೊನ್ನಾಳಿ), ಕೆ ಸುಬ್ರಮಣ್ಯಂ (9945738141) (ಚನ್ನಗಿರಿ), ಎಂ.ಕೆ.ಶಿವನಗೌಡ (9902105734) (ಜಗಳೂರು), ಟಿ. ಶಶಿಕಲಾ (9945458058), ಬಿ.ಚನ್ನಪ್ಪ (9590829024) (ದಾವಣಗೆರೆ) ಇವರನ್ನು ಸಂಪರ್ಕಿಸಿ ಹೆಸರು ನೋಂದಾಯಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ದೂ.ಸಂ. 08192-263936 ಅಥವಾ ಜಿಲ್ಲಾ ವಿಕಲಚೇತನರ ಸಹಾಯವಾಣಿ ಕೇಂದ್ರ ಸ.ಸಂ  08192 263939 ಗೆ ಸಂಪರ್ಕಿಸಲು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣಾಧಿಕಾರಿ  ಡಾ.ಕೆ.ಕೆ. ಪ್ರಕಾಶ್ ತಿಳಿಸಿದ್ದಾರೆ.

error: Content is protected !!