ದಾವಣಗೆರೆ, ನ. 20- ನಗರದ ಬಾಪೂಜಿ ಹಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ 68ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಬಾಪೂಜಿ ಇಂಜಿನಿಯ ರಿಂಗ್ ಕಾಲೇಜಿನ ಇಂಗ್ಲಿಷ್ ಹಿರಿಯ ಪ್ರಾಧ್ಯಾಪಕ ಈಶ್ವರಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ನಮ್ಮ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಸಿಗಲು ಅನೇಕ ಹೋರಾಟಗಾರರು ತಮ್ಮ ಕೊಡುಗೆಯನ್ನು ನೀಡಿದ್ದಾರೆ. ನಮ್ಮ ಕನ್ನಡ ಭಾಷೆಯನ್ನು ಉಳಿಸಲು ನಾವು ಎಲ್ಲಾ ಕ್ಷೇತ್ರಗಳಲ್ಲೂ ಕನ್ನಡವನ್ನು ಯಥೇಚ್ಛವಾಗಿ ಬಳಕೆ ಮಾಡಬೇಕು. ಆಗಲೇ ನಮ್ಮ ಭಾಷೆ ಉಳಿಯಲು ಸಾಧ್ಯ ಎಂದು ತಮ್ಮ ಆಶಯವನ್ನು ವ್ಯಕ್ತಪಡಿಸಿದರು.
ಶಾಲೆಯ ಮುಖ್ಯಸ್ಥ ಮಂಜುನಾಥ ರಂಗರಾಜು ಮಾತನಾಡಿ, ಕನ್ನಡ ಭಾಷೆಯನ್ನೂ ಸಹ ನಾವು ಅತ್ಯಂತ ಅರ್ಥಪೂರ್ಣವಾಗಿ ಪ್ರೀತಿ ಸುತ್ತಾ ಅದನ್ನು ಬಳಸಿ, ಬೆಳೆಸೋಣ ಎಂದು ಕರೆ ನೀಡಿದರು.
ಪ್ರಾಚಾರ್ಯರಾದ ಜೆ.ಎಸ್. ವನಿತಾ ಮಾತನಾಡಿ, ಕನ್ನಡ ಭಾಷೆ ಪ್ರಪಂಚದ ಎಲ್ಲಾ ಭಾಷೆಗಳಲ್ಲಿ ಅತ್ಯಂತ ವಿಶೇಷವಾಗಿದ್ದು, ಈ ಕನ್ನಡ ಭಾಷೆಗೆ ಸುಮಾರು 2500 ವರ್ಷಗಳ ಇತಿಹಾಸವಿರುವುದನ್ನು ನಾವೆಲ್ಲರೂ ಓದಿದ್ದೇವೆ ಎಂದು ಮನನ ಮಾಡಿದರು.
10ನೇ ತರಗತಿಯ ವಿದ್ಯಾರ್ಥಿನಿ ಕೆ.ಎಸ್. ವರ್ಷ ಮಾತನಾಡಿ, ಕನ್ನಡ ಭಾಷೆ, ನೆಲ, ಜಲ ಹಾಗೂ ಸಂಸ್ಕೃತಿಯ ಬಗ್ಗೆ ಭಾಷಣ ಮಾಡಿದರು. ಕನ್ನಡವನ್ನು ಉಳಿಸುವಂತಹ ಬೆಳೆಸುವಂತಹ ರೋಮಾಂಚನವಾದ ಗೀತೆಯಾದ ಡಿ.ಎಸ್ ಕರ್ಕಿ ಅವರ ವಿರಚಿತ `ಹಚ್ಚೇವು ಕನ್ನಡದ ದೀಪ’ ಗೀತೆಗೆ ನೃತ್ಯವನ್ನು ಹಾಗೂ ನಮ್ಮ ವಿದ್ಯಾರ್ಥಿಗಳು ಅನೇಕ ನೃತ್ಯಗಳನ್ನು ಮಾಡುವ ಮೂಲಕ ಕನ್ನಡ ಅಭಿಮಾನವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನಮ್ಮ ಶಾಲೆಯ ಶೈಕ್ಷಣಿಕ ಮಾರ್ಗದರ್ಶಕ ಸಿ. ಮಂಜಪ್ಪ, ಪ್ರೌಢಶಾಲಾ ವಿಭಾಗದ ಪ್ರಭಾರಿ ಪಿ.ವಿ. ಪ್ರಭು, ಶ್ರೀಮತಿ ಸವಿತಾ ರಮೇಶ್, ಪ್ರಾಥಮಿಕ ವಿಭಾಗದ ಮುಖ್ಯಸ್ಥರಾದ ಶೀಬಾರಾಣಿ ಉಪಸ್ಥಿತರಿದ್ದರು.