ಸಾರಥಿ-ಕರಲಹಳ್ಳಿ ಕೈಗಾರಿಕಾ ಪ್ರದೇಶ ಅಭಿವೃದ್ಧಿ; ನಾಡಿದ್ದು ಸಭೆ

ದಾವಣಗೆರೆ, ನ.1-ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ವತಿಯಿಂದ ಹರಿಹರ ತಾಲ್ಲೂಕು ಸಾರಥಿ-ಕರಲಹಳ್ಳಿ ಗ್ರಾಮದ ಕೈಗಾರಿಕಾ ಪ್ರದೇಶವನ್ನು 136.03 ಹೆಕ್ಟೇರ್ (336 ಎಕರೆ 5 ಗುಂಟೆ) ವಿಸ್ತೀರ್ಣದ ಪ್ರದೇಶದಲ್ಲಿ 2ನೇ ಹಂತವನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಿದ್ದು,  ಈ ಸಂಬಂಧ ಜಿಲ್ಲಾಧಿಕಾರಿಗಳು ಇದೇ ದಿನಾಂಕ 4ರಂದು ಕರೂರು ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ವಲಯ ಕಚೇರಿಯಲ್ಲಿ  ಸಾರ್ವಜನಿಕ ಸಭೆಯನ್ನು ಕರೆದಿದ್ದಾರೆ.

error: Content is protected !!