ಚಳ್ಳಕೆರೆ : ಗ್ರಾಪಂ ಲೈಬ್ರರಿ ನೌಕರರಿಗೆ ಸನ್ಮಾನ

ಚಳ್ಳಕೆರೆ : ಗ್ರಾಪಂ ಲೈಬ್ರರಿ ನೌಕರರಿಗೆ ಸನ್ಮಾನ

ಚಳ್ಳಕೆರೆ, ನ.1- ಇಲ್ಲಿನ ಗ್ರಾ.ಪಂ. ಲೈಬ್ರರಿ ನೌಕರರಾದ ಫಗಡಲಬಂಡೆ ಪಂಚಾಕ್ಷರಪ್ಪ ರಾಜಣ್ಣ ಮತ್ತು ಗೌರಸಮುದ್ರದ ದಾಸಣ್ಣ ಇವರಿಗೆ ಜಿಲ್ಲಾ ಗ್ರಂಥಾಲಯ ಅಧಿಕಾರಿ ತಿಪ್ಪೇಸ್ವಾಮಿ ಅವರು ಇಲ್ಲಿನ ತಾಲ್ಲೂಕು ಕೃಷ್ಣರಾಜೇಂದ್ರ ಗ್ರಂಥಾಲಯದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.

ನಂತರ ಗ್ರಾ.ಪಂ. ಲೈಬ್ರರಿ ನೌಕರರನ್ನುದ್ದೇಶಿಸಿ ಮಾತನಾಡಿದ ತಿಪ್ಪೇಸ್ವಾಮಿ ಅವರು, ನಮ್ಮ ಇಲಾಖೆಯಲ್ಲಿ ಇದ್ದಂತಹ ನೌಕರರಿಗೆ ಸರ್ಕಾರದ ಮಟ್ಟದಲ್ಲಿ ಕನಿಷ್ಟ ವೇತನ ಜಾರಿಯಾಗಿರುವುದು ತುಂಬಾ ಸಂತೋಷವಾಗಿದೆ ಎಂದರು.

ತಾ.ಪಂ. ಲೈಬ್ರರಿ ಅಧ್ಯಕ್ಷ ದೊಣ್ಣೆಹಳ್ಳಿ ತಿಪ್ಪೇಸ್ವಾಮಿ ಮಾತನಾಡಿ, ಸರ್ಕಾರದವರು 60 ವರ್ಷ ತುಂಬಿದ ಗ್ರಾ.ಪಂ.ನೌಕರರಿಗೆ  ಸರ್ಕಾರದಿಂದ ಹಣದ ವ್ಯವಸ್ಥೆ ಮಾಡಬೇಕಿತ್ತು ಎಂದು ಹೇಳಿದರು.

ಈ ಸಂದರ್ಭದಲ್ಲಿ ತಿಮ್ಮಪ್ಪನಹಳ್ಳಿ ಬಸವರಾಜು, ಗೌರಿಪುರ ಪಾಂಡುರಂಗಪ್ಪ, ರಘು, ಡಿ. ತಿಮ್ಮರಾಯ ಮತ್ತಿತರರು ಉಪಸ್ಥಿತರಿದ್ದರು.

error: Content is protected !!