ಸರ್ಕಾರ ದಿವಾಳಿಯಾಗಿದೆ

ಸರ್ಕಾರ ದಿವಾಳಿಯಾಗಿದೆ

ಮಾಜಿ ಸಚಿವ ಬಿ.ಸಿ.ಪಾಟೀಲ

ರಾಣೇಬೆನ್ನೂರು, ಅ.29- ಬಿಜೆಪಿ ಸರ್ಕಾರ ರಚನೆಯಾಗಿ 5 ತಿಂಗ ಳಲ್ಲಿ ರಾಜ್ಯಾದ್ಯಂತ ಸಾವಿ ರಾರು ಕೋಟಿಗಳ ಅಭಿ ವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು. ಆದರೆ ಸಿದ್ದರಾಮಯ್ಯ ಸರ್ಕಾರ ರಚನೆಯಾಗಿ 7 ತಿಂಗಳುಗಳಾದರೂ ಒಂದೇ ಒಂದು ಅಭಿವೃದ್ಧಿ ಕಾಮಗಾರಿ ಮಾಡಲು ಮುಂದಾಗಿಲ್ಲ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ ಹೇಳಿದರು.ಅವರು ರಾಣೇಬೆನ್ನೂರು ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು.

ರಾಜ್ಯದ ರೈತರಿಗೆ ಕೊಡಬೇಕಾಗಿರುವ ಹಣ ಕೊಟ್ಟಿಲ್ಲ. ಸರ್ಕಾರಕ್ಕೆ ರೈತರ ಸಂಕಷ್ಟಕ್ಕೆ ಸ್ಪಂದಿಸುವ ಮನಸ್ಸೇ ಇಲ್ಲ. ಸರ್ಕಾರದ ದಿವಾಳಿತನ ಮುಚ್ಚಿಕೊಳ್ಳಲು ಬಿಜೆಪಿ  ಮುಖಂಡರು ಸರ್ಕಾರ ಬೀಳಿಸುವ ಪ್ರಯತ್ನ , ಹುಲಿ ಉಗುರು ಪ್ರಕರಣ ಮುಂತಾದ ಸುಳ್ಳುಗಳನ್ನು ಹರಿಬಿಟ್ಟು ಜನರ ಮನಸ್ಸು ಬೇರೆಡೆ ಸೆಳೆಯುವ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಅವರು ಹೇಳಿದರು.

ಬರಲಿರುವ ಲೋಕಸಭೆ ಚುನಾವಣೆಗೆ ನಾನು ಆಕಾಂಕ್ಷಿಯಾಗಿದ್ದು, ನನಗೆ ಬಿಜೆಪಿ  ಟಿಕೆಟ್ ನೀಡಿದರೆ ನಿಲ್ಲುತ್ತೇನೆ. ನನಗೆ ನೀಡದಿದ್ದರೆ,  ಕ್ಷೇತ್ರದ ವ್ಯಾಪ್ತಿಯಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರು, ಆಕಾಂಕ್ಷಿಗಳು ಬಹಳಷ್ಟು ಜನರಿದ್ದಾರೆ ಕಾರಣ ಕ್ಷೇತ್ರದ ವ್ಯಾಪ್ತಿಯ ಗದಗ,  ಹಾವೇರಿ ಜಿಲ್ಲೆಯ ಯಾರಿಗಾದರೂ ಟಿಕೆಟ್ ಕೊಡುವಂತೆ ಬಿಜೆಪಿ ಹೈಕಮಾಂಡ್‌ಗೆ ಮನವಿ ಮಾಡಿದ್ದೇನೆ ಎಂದು, ಹಾವೇರಿ ಲೋಕಸಭೆಗೆ ಕೆ.ಎಸ್. ಈಶ್ವರಪ್ಪ ಮಗ ಕಾಂತೇಶ ಆಕಾಂಕ್ಷಿಯಾಗಿದ್ದಾರೆ ಎನ್ನುವ ಪ್ರಶ್ನೆಗೆ  ಬಿ.ಸಿ. ಪಾಟೀಲ್ ಈ ರೀತಿ ಪ್ರತಿಕ್ರಿಯಿಸಿದರು.

ರಾಣೇಬೆನ್ನೂರಿಗೆ ದರ್ಶನ್‌ : ದಿನಾಂಕ 1ರಂದು ಸಂಜೆ 6 ಗಂಟೆಗೆ ನಗರಸಭೆ ಕ್ರೀಡಾಂಗಣದಲ್ಲಿ ನಡೆಯುವ `ಗರಡಿ’ ಚಿತ್ರದ  ಟ್ರೈಲರ್ ಬಿಡುಗಡೆಗೆ ಚಿತ್ರನಟ ದರ್ಶನ್‌ ಹಾಗೂ ಇನ್ನಿತರ ನಟರು ಆಗಮಿಸುವರು. ನಂತರ ಅವರಿಂದ ಮನರಂಜನೆ ಕಾರ್ಯಕ್ರಮ ನಡೆಯಲಿದೆ ಎಂದು ಚಿತ್ರ ನಟರೂ ಆಗಿರುವ ಮಾಜಿ ಮಂತ್ರಿ ಬಿ.ಸಿ.ಪಾಟೀಲ್‌ ಹೇಳಿದರು.

error: Content is protected !!