ಮಲೇಬೆನ್ನೂರು, ಅ. 11- ಕೊಮಾರನಹಳ್ಳಿಯ ಹೆಳವನ ಕಟ್ಟೆ ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿ ದೇವಸ್ಥಾನದದ ವತಿ ಯಿಂದ ಕಲ್ಯಾಣ ಮಂಟಪದಲ್ಲಿ ಈಚೆಗೆ ಹಮ್ಮಿಕೊಂಡಿದ್ದ `ಭೂ ಕೈಲಾಸ’ ಗಮಕ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು. ವಿದುಷಿ ಹಾಸನದ ಶ್ರೀಮತಿ ರಾಧಾಕೃಷ್ಣ ಸ್ವರೂಪ ಅವರು ಈ ಹಿಂದೆ ಮಲೇಬೆನ್ನೂರಿನಲ್ಲಿ ಸುನಾದ ಸಂಗೀತ ಶಾಲೆ ನಡೆಸುತ್ತಿದ್ದು, ಸೊಗಸಾಗಿ ಗಮಕ ವಾಚನ ಮಾಡಿದರೆ, ವಿದುಷಿ ತಿಪಟೂರಿನ ಶ್ರೀಮತಿ ಸೌಮ್ಯಶ್ರೀ ಶ್ರೀಕಂಠ ಅವರು ಬಹಳ ಚೆನ್ನಾಗಿ ಗಮಕ ವ್ಯಾಖ್ಯಾನ ಮಾಡುವ ಮೂಲಕ 2 ತಾಸು ಸಭಿಕರನ್ನು ಹಿಡಿದಿಟ್ಟುಕೊಂಡಿದ್ದರು. ಇದಕ್ಕೂ ಮುನ್ನ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಗ್ರಾಮದ ಜಿ. ಮಂಜುನಾಥ್ ಪಟೇಲ್, ಐರಣಿ ಅಣ್ಣಪ್ಪ, ಮಡಿವಾಳರ ಬಸವರಾಜ್, ನೇತ್ರಾವತಿ, ನಹುಮಂತಪ್ಪ, ದಾನಪ್ಳ ಹನುಮಂತಪ್ಪ, ಆಧ್ಯಾತ್ಮ ಚಿಂತಕ ಎಂ.ಸಿ. ನಟರಾಜ್, ದೇವಸ್ಥಾನದ ಆಚಕ ಗುರುರಾಜ ಚಾರ್, ಮಲೇಬೆನ್ನೂರಿನ ಬಿ. ವೀರಯ್ಯ, ಕೆ.ಜಿ. ರಂಗನಾಥ್, ಶಿಕ್ಷಕ ದಿವಾ ಕರ್, ಪವನ್ಕುಮಾರ್, ದಿಬ್ದಹಳ್ಳಿ ನಾಗರಾಜ್ ಮತ್ತಿತರರಿದ್ದರು.
ಗಮನ ಸೆಳೆದ `ಭೂ ಕೈಲಾಸ’ ಗಮಕ
![07 bhoo kailasa 12.10.2023 ಗಮನ ಸೆಳೆದ `ಭೂ ಕೈಲಾಸ’ ಗಮಕ](https://janathavani.com/wp-content/uploads/2023/10/07-bhoo-kailasa-12.10.2023.jpg)