ಚಿತ್ರದುರ್ಗ, ಅ.8- ನಗರದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗ ದಳದ ವತಿಯಿಂದ ಪ್ರತಿಷ್ಟಾಪಿಸಿದ್ದ 18 ನೇ ವರ್ಷದ ಹಿಂದೂ ಮಹಾಗಣಪತಿ ವಿಸರ್ಜನೆ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಐತಿಹಾಸಿಕ ಶೋಭಾ ಯಾತ್ರೆಯಲ್ಲಿ ನಾಡಿನ ನಾನಾ ಭಾಗಗಳಿಂದ ಲಕ್ಷಾಂತರ ಜನ ಭಾಗವಹಿಸಿದ್ದರು. ಶ್ರೀರಾಮ, ಆಂಜನೇಯ, ಶಿವಾಜಿ ಅವರ ಪ್ರತಿಮೆಗಳು ಮೆರವಣಿಗೆಯಲ್ಲಿ ಗಮನ ಸೆಳೆದೆವು, ಮದಕರಿ ನಾಯಕ, ಒನಕೆ ಓಬವ್ವ, ಬಸವಣ್ಣ, ಅಂಬೇಡ್ಕರ್ ಸೇರಿದಂತೆ ಮತ್ತಿತರೆ ಸ್ಥಾಪಿತ ಪ್ರತಿಮೆಗಳಿಗೆ ಹೂವಿನ ಅಲಂಕಾರ ಮಾಡಲಾಗಿತ್ತು.
ಅಲ್ಲದೆ ಇಡೀ ನಗರ ನವ ವಧುವಿನಂತೆ ಸಿಂಗಾರ ಗೊಂಡಿತ್ತು, ನಾಲ್ಕು ಬೃಹತ್ ಡಿಜೆಗಳ ಸಂಗೀತಕ್ಕೆ ಯುವಕರು ಹುಚ್ಚೆದ್ದು ಕುಣಿದು ಸಂಭ್ರಮಿಸಿದರು, ರಾತ್ರಿ 11 ಗಂಟೆ ನಂತರ ಚಂದವಳ್ಳಿ ತೋಟ ದಲ್ಲಿರುವ ನೀರಿನ ಹೊಂಡದಲ್ಲಿ ಮಹಾಗಣಪತಿ ಯನ್ನು ವಿಸರ್ಜನೆ ಮಾಡಲಾಯಿತು.