ಸತೀಶ್ ಜಾರಕಿಹೊಳಿ ಹೇಳಿಕೆಗೆ ಖಂಡನೆ

ದಾವಣಗೆರೆ, ಅ.5- ಶ್ರೀ ವಾಲ್ಮೀಕಿ ಗುರುಪೀಠ ರಾಜನಹಳ್ಳಿ ಟ್ರಸ್ಟನ್ನು ಸೂಪರ್ ಸೀಡ್ ಮಾಡುವಂತೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿರುವ ಅರ್ಜಿದಾರರ ವಿರುದ್ಧವೇ ಕೇಸು ದಾಖಲಿಸುವುದಾಗಿ ಹೇಳಿರುವ ಸಚಿವ ಸತೀಶ್ ಜಾರಕಿ ಹೊಳಿ ಹೇಳಿಕೆ ಖಂಡನೀಯ ಎಂದು ವಕೀಲ ಗುಮ್ಮನೂರು ಕೆ.ಎಂ. ಮಲ್ಲಿಕಾರ್ಜುನ್ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಟ್ರಸ್ಟ್ ಸೂಪರ್ ಸೀಡ್‌ಗಾಗಿ ಈಗಾಗಲೇ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ. ಇದೇ ಅಕ್ಟೋಬರ್ 6ಕ್ಕೆ ತಕರಾರು ಸಲ್ಲಿಸಲು ಅಂತಿಮ ಆದೇಶ ಸಹ ಆಗಿದೆ. ಈ ಹಂತದಲ್ಲಿ ಕೇಸು ವಾಪಸ್ ತೆಗೆದುಕೊಳ್ಳದಿದ್ದರೆ ಅರ್ಜಿದಾರರ ಮೇಲೆ ಪ್ರಕರಣ ದಾಖಲಿಸುವಂತೆ ಹೇಳಿರುವ ಹೇಳಿಕೆ ನಮಗೆ ನೋವುಂಟು ಮಾಡಿದೆ ಎಂದರು.

ನಮ್ಮ ಹೋರಾಟ ಹತ್ತಿಕ್ಕುವ ಸಲುವಾಗಿ ಒಬ್ಬ ಜನಪ್ರತಿನಿಧಿಯಾಗಿ ಇಂತಹ ಹೇಳಿಕೆ ನೀಡಿರುವ ಜಾರಕಿಹೊಳಿ ಅವರನ್ನು ಮುಖ್ಯಮಂತ್ರಿಗಳು ಸಚಿವ ಸ್ಥಾನದಿಂದ ವಜಾ ಮಾಡಬೇಕು. ಜಾರಕಿಹೊಳಿ ಕೂಡಲೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದವರು ಒತ್ತಾಯಿಸಿದರು.

ನಮ್ಮ ವಿರುದ್ಧ ದೂರು ಕೊಡುವುದಾದರೆ ನೇರವಾಗಿ ಸ್ವಾಮೀಜಿ ಅಥವಾ ಜಾರಕಿಹೊಳಿ ದೂರು ಕೊಡದೇ ಸಮುದಾಯದವರಿಂದ ದೂರು ಕೊಡಿಸಿರುವುದು ಸಮುದಾಯದ ನಡುವೆ ಬಿರುಕು ಮೂಡಿಸುವ ಕೆಲಸ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸುಭಾಷ್, ಬಿಜಾಪುರದ ಪ್ರಶಾಂತ್ ದಳವಾಯಿ, ತಿಪ್ಪೇಸ್ವಾಮಿ ಇದ್ದರು.

error: Content is protected !!