ಹರಪನಹಳ್ಳಿ, ಸೆ. 7- ತಾಲ್ಲೂಕಿನ ಭೈರಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾಭಿವೃದ್ಧಿಗೆ ಗ್ರಾಮದ ಬಣಕಾರ ದಯಾನಂದ ಅವರು 4 ಲಕ್ಷ ರೂ.ಗಳ ದೇಣಿಗೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಮಾಡಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ತಾವು ಓದಿದ ಶಾಲೆಯ ಬಗ್ಗೆ ಅಪಾರ ಕಾಳಜಿ ಹೊಂದಿದ ದಯಾನಂದ ಅವರು, ಅಬಕಾರಿ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಶಾಲೆಗೆ ಸುಣ್ಣ, ಬಣ್ಣ, ವಿದ್ಯುತ್ ವ್ಯವಸ್ಥೆ, ಟೈಲ್ಸ್ ಅಳವಡಿಕೆ, ಕಿಟಕಿಗಳ ದುರಸ್ತಿ, ಶಾಲಾ ಬೋರ್ಡ್,ಗ್ರಂಥಾಲಯ ಪುಸ್ತಕಗಳ ಕೊಡುಗೆ ಹೀಗೆ 4 ಲಕ್ಷ ರೂ.ಗಳನ್ನು ಅಭಿವೃದ್ಧಿ ಕೆಲಸಗಳ ರೂಪದಲ್ಲಿ ಮಾಡಿಸಿಕೊಟ್ಟಿದ್ದಾರೆ.
ದಾನಿ ದಯಾನಂದ ಅವರ ಪರವಾಗಿ ತಂದೆ ಬಣಕಾರ ಮಂಜುನಾಥ ಅವರಿಗೆ ಈಚೆಗೆ ಶಾಲಾ ವತಿಯಿಂದ ಮುಖ್ಯ ಶಿಕ್ಷಕ ಚಂದ್ರಮೌಳಿ ಹಾಗೂ ಎಸ್ಡಿಎಂಸಿ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.