ಕೊಟ್ಟೂರು, ಆ. 2 – ಕೊಟ್ಟೂರಿನಿಂದ ವರ್ಗಾವಣೆಗೊಂಡ ತಹಶೀಲ್ದಾರ್ ಎಂ. ಕುಮಾರಸ್ವಾಮಿ ಬೀಳ್ಕೊಡುಗೆ ಸಮಾರಂಭದಲ್ಲಿ ಪ್ರಭಾರಿ ತಹಶೀಲ್ದಾರ್ ಅಮರೀಶ ಜಾಲಹಳ್ಳಿಯವರಿಗೆ ಅಧಿಕಾರ ಹಸ್ತಾಂತರ ಮಾಡಿದರು.
ಕೊಟ್ಟೂರು ತಾಲ್ಲೂಕು ಕಚೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ಸರ್ಕಾರ ಯೋಜನೆಗಳ ಅನುಷ್ಠಾನ, ಆನ್ ಲೈನ್ ಸೇವೆ, ಸಾರ್ವಜನಿಕರ ಸಮಸ್ಯೆ ಸ್ಪಂದನೆಗೆ ಜಿಲ್ಲೆಯಲ್ಲಿ ಕೊಟ್ಟೂರು ಮಾದರಿ ತಾಲ್ಲೂಕು ಆಗಿದೆ. ನಾನು ಒಂದೂವರೆ ವರ್ಷದಲ್ಲಿ ನಿರ್ಗತಿಕ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಸಹಾಯಕರಿಗೆ ಉತ್ತಮ ಸೇವೆ ಒದಗಿಸಿದ್ದೇನೆ ಎಂಬ ತೃಪ್ತಿಯಿದೆ ಎಂದು ಕಾರಟಗಿಗೆ ವರ್ಗಾವಣೆಗೊಂಡ ತಹಶೀಲ್ದಾರ್ ಎಂ. ಕುಮಾರಸ್ವಾಮಿ ಮಾತನಾಡಿದರು.ತಾಲ್ಲೂಕಿನಲ್ಲಿ ಖಾಸಗಿ ಒಡೆತನದಲ್ಲಿದ್ದ 35 ಎಕರೆ ಸರ್ಕಾರಿ ಭೂಮಿಯನ್ನು ಕಂದಾಯ ಇಲಾಖೆಗೆ ಸೇರ್ಪಡೆಗೊಳಿಸಿದ್ದೇನೆ ಎಂದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕೊಟ್ಟೂರು ತಾಲ್ಲೂಕು ಅಧ್ಯಕ್ಷ ಕೆ. ಕೊಟ್ರೇಶ್ ಹಾಗೂ ಹಿರಿಯ ಪತ್ರಕರ್ತರಾದ ಜಿ. ಸೋಮಶೇಖರ್, ದೇವರ ಮನೆ ಸುರೇಶ್, ಕೆ. ಎಂ. ಚಂದ್ರಶೇಖರ್, ರವಿಕುಮಾರ್, ತಗ್ಗಿನಕೇರಿ ಕೊಟ್ರೇಶ್, ಬಂದಾತರ ಕೊಟ್ರೇಶ್, ಪರಶುರಾಮ್ ಸುಲೇಕೆ, ಉತ್ತಂಗಿ ಕೊಟ್ರೇಶ್, ಇವರಗಳೆಲ್ಲರೂ ಸಂಘದ ವತಿಯಿಂದ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಕೊಟ್ಟೂರು ಪ್ರಭಾರಿ ತಹಶೀಲ್ದಾರ್ ಅಮರೀಶ ಜಾಲಹಳ್ಳಿ, ವರ್ಗಾವಣೆಗೊಂಡ ತಹಶೀಲ್ದಾರ್ ಎಂ. ಕುಮಾರಸ್ವಾಮಿ, ಆರ್. ಐ. ಹಾಲಸ್ವಾಮಿ, ಸಿರಾಜುದ್ದೀನ್, ವಿ.ಎ. ಕೊಟ್ರೇಶ್, ವಿ.ಎ. ಹರೀಶ್, ಹರಪನಹಳ್ಳಿ ರವಿ, ತಹಶೀಲ್ದಾರ್ ಕಚೇರಿಯ ಸಿಬ್ಬಂದಿ ವರ್ಗದವರು ಹಾಗೂ ಪ.ಪಂ.ಮುಖ್ಯಾಧಿಕಾರಿ ನಸರುಲ್ಲಾ ಇತರರಿದ್ದರು.