ನ್ಯಾಮತಿ, ಜೂ. 1- ತಾಲ್ಲೂಕಿನ ಸವಳಂಗ – ಶಿಕಾರಿಪುರ ರಸ್ತೆಯ ಚಿನ್ನಿಕಟ್ಟೆ ಬಳಿಯ ದೇವೇಂದ್ರಯ್ಯನವರ ಜಮೀನ ಬಳಿ ಟಿವಿಎಸ್ ಎಕ್ಸೆಲ್ ಮೋಟರ್ ಸೈಕಲ್ ಮತ್ತು ಕಾರು ಮಧ್ಯೆಸಂಭವಿಸಿದ ರಸ್ತೆ ಅಪಘಾತದಲ್ಲಿ ಚಿನ್ನಿಕಟ್ಟೆ ಗ್ರಾಮದ ಮುನೀರ್ ಸಾಬ್ (60) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಜಮೀನು ಕೆಲಸಕ್ಕೆ ಕೆಲಸದವರನ್ನು ಕರೆದು ಬರಲೆಂದು ಚಿನ್ನಿಕಟ್ಟೆಯಿಂದ ಶಿಕಾರಿಪುರ ಕಡೆ ಹೋಗುತ್ತಿರುವಾಗ ಎದುರಿಗೆ ಬಂದ ಕಾರು ಮೋಟರ್ ಸೈಕಲ್‍ಗೆ ಡಿಕ್ಕಿಯಾಗಿ ಬೈಕ್ ಸವಾರನ ಬಲಗಾಲು, ಎದೆ, ಪಕ್ಕೆಗೆ ತೀವ್ರ ತರ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ಬೈಕ್ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಆತನ ಮಗ ಸನಾವುಲ್ಲಾ ಕಾರು ಚಾಲಕ ವಿನಯ್ ವಿರುದ್ಧ ನ್ಯಾಮತಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.