ಹೊಸ ಬೆಳವನೂರಿನಲ್ಲಿ ಇಂದು ಕಸಾಪ ಸಾಹಿತ್ಯೋತ್ಸವ, ಉಪನ್ಯಾಸ

ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ (ದಾವಣಗೆರೆ) ಮತ್ತು ಸ್ತ್ರೀಶಕ್ತಿ ಸಂಘಗಳು (ಬೆಳವನೂರು) ಹಾಗೂ ಹಿರಿಯ ನಾಗರಿಕರ ಸಹಾಯವಾಣಿ (ದಾವಣಗೆರೆ) ಇವರ ಸಹಯೋಗದಲ್ಲಿ ಶಾಲಾ-ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ದತ್ತಿ ಉಪನ್ಯಾಸವನ್ನು ಇಂದು ಮಧ್ಯಾಹ್ನ 2.30 ಕ್ಕೆ ಬೆಳವನೂರಿನ ಕುವೆಂಪು ಮಾದರಿ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮವನ್ನು ಬೆಳವನೂರು ಗ್ರಾ.ಪಂ. ಮಾಜಿ ಅಧ್ಯಕ್ಷ, ಹಾಲಿ ಸದಸ್ಯರಾದ ಮಹಾಂತೇಶ್‌ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷ ಅಶು ಟಿ.ಎ. ವಹಿಸುವರು. `ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ತಾಯಂದಿರ ಪಾತ್ರ’ ವಿಷಯ ಕುರಿತು ರುದ್ರಮುನಿ ಹಿರೇಮಠ ಉಪನ್ಯಾಸ ನೀಡುವರು. ಮುಖ್ಯ ಅತಿಥಿಗಳಾಗಿ ಕು. ರೇವತಿ ಆಗಮಿಸುವರು. ಕಾರ್ಯಕ್ರಮದಲ್ಲಿ ನವೀನ್‌ಕುಮಾರ್‌ ಉಪಸ್ಥಿತರಿರುವರು. ಆರ್‌. ಶಿವಕುಮಾರ್‌ ಪ್ರಾಸ್ತಾವಿಕ ನುಡಿಗಳನ್ನಾಡುವರು.

ಕಾರ್ಯಕ್ರಮದಲ್ಲಿ ಜಿ.ಎಸ್‌. ಪ್ರಕಾಶ್‌ ಮತ್ತು ಶ್ರೀಮತಿ ಕಮಲಾ ಪ್ರಕಾಶ್‌ ಶೆಟ್ಟಿ ಹೆಸರಿನ ದತ್ತಿಯನ್ನು ದತ್ತಿ ದಾನಿಗಳಾದ ಜಿ.ಎಸ್‌. ಪ್ರಕಾಶ್‌, ಶ್ರೀಮತಿ ಕಮಲಾ ಪ್ರಕಾಶ್‌ ಹಾಗೂ ಶ್ರೀಮತಿ ಗೌರಮ್ಮ ಮತ್ತು ಮೋತಿ ಪಿ. ರಾಮರಾವ್ ದತ್ತಿಯನ್ನು ದತ್ತಿ ದಾನಿಗಳಾದ ಮೋತಿ ಪಿ. ರಾಮರಾವ್‌ ಹಾಗೂ ಶ್ರೀಮತಿ ಸರೋಜಿನಿ ದಕ್ಷಿಣಮೂರ್ತಿ ದತ್ತಿಯನ್ನು ದತ್ತಿ ದಾನಿಗಳಾದ ಶ್ರೀಮತಿ ಡಿ.ಎಂ. ಸರೋಜಿನಿ ಇವರು ನಡೆಸಿಕೊಡುವರು.

error: Content is protected !!