ಕಲುಬುರ್ಗಿಗೆ ಹವಾ ನಿಯಂತ್ರಿತ ಸಾರಿಗೆ ಸೌಕರ್ಯ

ದಾವಣಗೆರೆ,  ಮೇ 23- ದಾವಣಗೆರೆ ಭಾಗದ ಪ್ರಯಾಣಿಕರ ಅನುಕೂಲಕ್ಕಾಗಿ ಮೇ 25 ರಿಂದ ದಾವಣಗೆರೆ ವಿಭಾಗದಿಂದ ಕಲುಬುರ್ಗಿಗೆ ಹೋಗಲು  ಹವಾ ನಿಯಂತ್ರಿತ ಸಾರಿಗೆ ಸೌಕರ್ಯವನ್ನು ಕಲ್ಪಿಸಲಾಗಿದೆ.

ದಾವಣಗೆರೆಯಿಂದ ರಾತ್ರಿ 8.30 ಕ್ಕೆ ಹೊರಟು ಹರಿಹರ-ಹರಪನಹಳ್ಳಿ-ಹೊಸಪೇಟೆ-ಗಂಗಾವತಿ-ಲಿಂಗಸೂರು ಮಾರ್ಗವಾಗಿ ಬೆಳಿಗ್ಗೆ 5.30 ಕ್ಕೆ ಕಲ್ಬುರ್ಗಿಗೆ  ಮತ್ತು ಕಲ್ಬುರ್ಗಿಯಿಂದ ರಾತ್ರಿ 9.15 ಕ್ಕೆ ಹೊರಟು ಲಿಂಗಸೂರು-ಗಂಗಾವತಿ-ಹೊಸಪೇಟೆ-ಹರಪನಹಳ್ಳಿ-ಹರಿಹರ ಮಾರ್ಗವಾಗಿ ಬೆಳಿಗ್ಗೆ 6.25 ಕ್ಕೆ ದಾವಣಗೆರೆ ತಲುಪುವುದು.

ksrtc.karnataka.gov.in ಜಾಲತಾಣದ ಮೂಲಕ ಮುಂಗಡ ಬುಕ್ಕಿಂಗ್ ಮಾಡಲು ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕ.ರಾ.ರ.ಸಾ.ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

error: Content is protected !!