ನಗರದ ವೃತ್ತಗಳಲ್ಲಿ ಸಿಗ್ನಲ್ ಮಾರ್ಕಿಂಗ್ ಇರಲಿ

ನಗರದ ವೃತ್ತಗಳಲ್ಲಿ ಸಿಗ್ನಲ್ ಮಾರ್ಕಿಂಗ್ ಇರಲಿ

ಮಾನ್ಯರೇ, 

ರೆಡ್ ಸಿಗ್ನಲ್ ಜಂಪ್ ಮಾಡಿದ ಸವಾರರಿಗೆ ಕೇವಲ ಒಂದೇ ಗಂಟೆಯಲ್ಲಿ ಹತ್ತು ಸಾವಿರಕ್ಕಿಂತಲೂ ಹೆಚ್ಚಿನ ಮೊತ್ತದ ದಂಡವನ್ನು ವಿಧಿಸಿದ್ದು, ಉತ್ತಮವಾದ ಸಂಗತಿಯಾಗಿರುತ್ತದೆ. ವರ್ಷದಿಂದ ವರ್ಷಕ್ಕೆ ವಾಹನಗಳ ಸಂಖ್ಯೆಯೂ ನಗರದಲ್ಲಿ ಹೆಚ್ಚುತ್ತಲೇ ಇದೆ. ವಾಹನ ದಟ್ಟಣೆ ಹೆಚ್ಚಾಗಿರುವ ಕಾರಣ ಸವಾರರು ದಿನದ ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ಕಚೇರಿಗೆ ಹೋಗುವ ಮತ್ತು ಮನೆಗೆ ಹಿಂತಿರುಗುವ ಧಾವಂತದಲ್ಲಿ ಸಿಗ್ನಲ್’ಗಳನ್ನು ನಿರ್ಲಕ್ಷಿಸಿ ವಾಹನವನ್ನು ಚಲಾಯಿಸುವುದು ಸಾಮಾನ್ಯ ಸಂಗತಿ ಆಗಿದೆ.

ಅಕ್ರಮವಾಗಿ ಸಿಗ್ನಲ್ ಜಂಪ್ ಮಾಡುವ ಸವಾರರಿಗೆ ದಂಡ ಹಾಕುವ ಜೊತೆ ಜೊತೆಗೆ ಜಮಾ ಆಗುವ ದಂಡದ ಮೊತ್ತದಲ್ಲಿ ವೈಜ್ಞಾನಿಕವಾಗಿ ಸಿಗ್ನಲ್ ಜಂಕ್ಷನ್ ಸ್ಥಳಗಳಲ್ಲಿ ರಸ್ತೆಗಳ ಮೇಲೆ ಕ್ರಮಬದ್ಧವಾಗಿ ಹಳದಿ ಮತ್ತು ಬಿಳಿ ಪೈಂಟ್ ಮೂಲಕ ಮಾರ್ಕಿಂಗ್ ಮಾಡಬೇಕು. ಹಾಗೆಯೇ ಸಿಗ್ನಲ್ ಬಿದ್ದಾಗ ಪಾದಚಾರಿಗಳಿಗೆ ರಸ್ತೆ ದಾಟಲು ನಿರ್ದಿಷ್ಟವಾದ ಪಥಗಳ ಮಾರ್ಕಿಂಗ್ ಇರದೇ ವಯೋವೃದ್ಧರು, ಮಕ್ಕಳು ಗೊಂದಲದಿಂದ ರಸ್ತೆಯನ್ನು ದಾಟುವುದನ್ನು ನಿತ್ಯ ಕಾಣಬಹುದಾಗಿದೆ.

ಆದ್ದರಿಂದ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ರಾಜಧಾನಿಯಲ್ಲಿ ಇರುವ ಹಾಗೇ ನಗರದ ವೃತ್ತಗಳಲ್ಲಿ ಈ ಕೂಡಲೇ ಕ್ರಮಬದ್ಧ ಮಾರ್ಕಿಂಗ್, ಕೇಳುವ ಹಾಗೇ ಸಂದೇಶಗಳನ್ನು ಅಳವಡಿಸುವ ಮೂಲಕ ಸವಾರರಲ್ಲಿ ಸಿಗ್ನಲ್ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಮತ್ತು ವಾಹನ ಸವಾರರು ಕೂಡ ನಿಯಮಗಳನ್ನು ತಪ್ಪದೇ ಪಾಲಿಸಬೇಕಿದೆ.

– ವೈ. ವಾದಿರಾಜ ಭಟ್, ವಕೀಲರು, ದಾವಣಗೆರೆ.

error: Content is protected !!