ಮಾನ್ಯರೇ,
ನಗರದಲ್ಲಿ ಬಿಸಿಲಿನ ಪ್ರಖರತೆಯು ಉತ್ತರ ಕರ್ನಾಟಕದ ಜಿಲ್ಲೆಗಳನ್ನು ಮೀರಿಸುವಂತಿದೆ. ಈಗಾಗಲೇ ಅಭಿವೃದ್ಧಿಯ ಹೆಸರಿನಲ್ಲಿ ನೆರಳು ಕೊಡುತ್ತಿದ್ದ ನೂರಾರು ಮರಗಳನ್ನು ಕಡಿದಿದ್ದಾರೆ.
ಹಿಂದೆ ದಿ. ಕಾಂ. ಪಂಪಾಪತಿ ಅವರು ತಮ್ಮ ದೂರದೃಷ್ಟಿಯಿಂದ ನೆಟ್ಟಿದ್ದ ಗಿಡಗಳು, ಬೃಹತ್ ಮರಗಳಾಗಿ ನೆರಳು ಸೇವೆ ನೀಡುತ್ತಿರುವುದನ್ನು ಇಂದು ಕೆಲವೇ ಬಡಾವಣೆಗಳಲ್ಲಿ ಕಾಣಬಹುದು. ಲಾಯರ್ ರಸ್ತೆ, ಪಿ.ಜೆ ಬಡಾವಣೆ, ಎಂ.ಸಿ. ಮೋದಿ ರಸ್ತೆ, ಪೆವಿಲಿಯನ್ ರಸ್ತೆ, ನಿಟ್ಟುವಳ್ಳಿ ರಸ್ತೆ ಸೇರಿದಂತೆ ಹಲವೆಡೆ ಕಾಣಬಹುದು. ಅಂದು ಸಾವಿರಾರು ಗಿಡಗಳನ್ನು ನೆಟ್ಟ ಪುಣ್ಯಾತ್ಮರು ಈಗ ಇರದೇ ಇರಬಹುದು. ಆದರೆ, ಅವರು ಮಾಡಿದಂತಹ ಅಭಿವೃದ್ಧಿ ಯೋಜನೆಗಳು, ಜನಪರ ಮತ್ತು ಪರಿಸರ ಸ್ನೇಹಿ ಕೆಲಸಗಳು ಇಂದಿಗೂ ಸಹ ಪ್ರತಿಯೋರ್ವರ ಮನದಲ್ಲಿ ಚಿರಸ್ತಾಯಿಯಾಗಿವೆ.
– ಡಿ. ಮುರುಗೇಶ್, ದಾವಣಗೆರೆ.