ರಾಯಣ್ಣ ವೃತ್ತದಲ್ಲಿ ರಸ್ತೆ ದುರಸ್ತಿ ಮಾಡಿ

ಮಾನ್ಯರೇ, 

ನಗರದ  ರಿಂಗ್‌ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರಸ್ತೆಗೆ ಅಡ್ಡಲಾಗಿ ಯಾವುದೋ ಪೈಪ್ ಲೈನ್ ಹಾಕಲು ನೆಲವನ್ನು ಅಗೆದು ಅದನ್ನು ಮುಚ್ಚಿರುವುದಿಲ್ಲ. ಇದರಿಂದ ಇಲ್ಲಿ ಅಡ್ಡಾಡುವ ವಾಹನ ಸವಾರರಿಗೆ ದೊಡ್ಡ ಸವಾಲಾಗಿದೆ.

ಗ್ರೀನ್ ಸಿಗ್ನಲ್ ಆದ ಕೂಡಲೇ ಫ್ಲೈ-ಓವರ್ ಕಡೆಯಿಂದ ನೇರವಾಗಿ ಬರುವ ವಾಹನ ಸವಾರರಿಗೆ ರಸ್ತೆ ಕತ್ತರಿಸಿದಂತಿರುವ ಈ ಗುಂಡಿ ದೂರದಿಂದ ಕಾಣುವುದಿಲ್ಲ. ಅದನ್ನು ಗಮನಿಸದೇ ವೇಗವಾಗಿ ಬರುತ್ತಾರೆ. ಗುಂಡಿ ಕಂಡ ಕೂಡಲೇ ಗಕ್ಕನೆ  ಬ್ರೇಕ್ ಹಾಕಿದರೆ, ಹಿಂದಿನಿಂದ ಬರುವ ವಾಹನಗಳು ಡಿಕ್ಕಿ ಹೊಡೆಯಬೇಕಾಗುತ್ತದೆ. ಈ ಸಮಸ್ಯೆಯೇನು ಇಂದು-ನಿನ್ನೆಯದಲ್ಲ. ವರ್ಷವೇ ಕಳೆಯುತ್ತಾ ಬಂದಿದೆ. ಆದರೂ ಇದು ಸಂಬಂಧಿಸಿದವರ ಗಮನಕ್ಕೆ ಬಾರದಿರುವುದು ಶೋಚನೀಯ ಸಂಗತಿ. ಅದೂ ಹೆದ್ದಾರಿಯಂತಹ ಜನ-ವಾಹನ ನಿಬಿಡ ವೃತ್ತದಲ್ಲಿ.


ನೊಂದ ವಾಹನ ಸವಾರ, ದಾವಣಗೆರೆ.

error: Content is protected !!