ರಾಣೇಬೆನ್ನೂರು, ಮಾ. 5 – ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ನಿಮಿತ್ಯ ಇಲ್ಲಿನ ಮರಾಠಾ ಕ್ಷತ್ರಿಯ ಸಮಾಜದಿಂದ ಭವ್ಯ ಮೆರವಣಿಗೆ ಏರ್ಪಡಿಸಲಾಗಿತ್ತು. ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಹೊರಟ ಮೆರವಣಿಗೆಗೆ ಮಾಜಿ ಶಾಸಕ ಅರುಣಕುಮಾರ ಪೂಜಾರ ಚಾಲನೆ ನೀಡಿದರು. ಬಿಜೆಪಿ ಮುಖಂಡ ಪ್ರಕಾಶ ಪೂಜಾರ, ಎಸ್.ಎಸ್. ರಾಮಲಿಂಗಣ್ಣ ನವರ, ಸಂತೋಷ ಪಾಟೀಲ, ಜಿ.ಜಿ. ಹೊಟ್ಟಿಗೌಡ್ರ, ಪರಮೇಶ ಗೂಳಣ್ಣನವರ, ಮಲ್ಲಪ್ಪ ಅಂಗಡಿ, ಸಮಾಜದ ಶಿವಮೂರ್ತಿ ದಿಲ್ಲಿವಾಲಾ, ಪರಶುರಾಮ ಕಾಳೇರ, ಸುಂದರಾ ರಾಮಚಂದ್ರ ಮತ್ತಿತರರಿದ್ದರು.
ಛತ್ರಪತಿ ಶಿವಾಜಿ ಜಯಂತಿ ರಾಣೇಬೆನ್ನೂರಿನಲ್ಲಿ ಭವ್ಯ ಮೆರವಣಿಗೆ
