ಗ್ಯಾರಂಟಿ ಪಡೆಯಲು ಸುಲಭ ಮಾರ್ಗ

ಗ್ಯಾರಂಟಿ ಪಡೆಯಲು ಸುಲಭ ಮಾರ್ಗ

ಪಂಚಾಯ್ತಿಗಳಲ್ಲಿ ಶಾಸಕರ ಸಹಾಯ ಕೇಂದ್ರ ಸ್ಥಾಪನೆ

ರಾಣೇಬೆನ್ನೂರು, ಜೂ.23- ಚುನಾವಣೆ ಪೂರ್ವದಲ್ಲಿ ಹೇಳಿದ  ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳನ್ನು   ತಾಲ್ಲೂಕಿನ ಜನತೆ ಪಡೆದುಕೊಳ್ಳಲು ಅನುಕೂಲವಾಗ ಲೆಂದು ಪ್ರತಿ ಗ್ರಾ.ಪಂ ಗಳಲ್ಲಿ  ಶಾಸಕರ ಸಹಾಯ ಕೇಂದ್ರ ತೆರೆಯಲು ತೀರ್ಮಾನಿ ಸಿದ್ದು, ಇಂದು ಕರೂರು ಗ್ರಾಮದಲ್ಲಿ  ಚಾಲನೆ ನೀಡಲಾಯಿತು.

ಶಾಸಕರ ಆಪ್ತರೇ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇಂದಿನಿಂದ ಗೃಹ ಜ್ಯೋತಿ ರಿಜಿಸ್ಟರ್ ಮಾಡಲಾಗುವುದು.ಕಾಂಗ್ರೆಸ್ ನೀಡಿದ ಎಲ್ಲ ಗ್ಯಾರಂಟಿಗಳು ಜನರ ಬದುಕಿಗೆ ಅತ್ಯಂತ ಹತ್ತಿರವಾದವುಗಳು. ಯಾಂತ್ರಿಕ ತೊಂದರೆಗಳನ್ನು ಅರಿತು  ಅವುಗಳನ್ನು ಪಡೆಯಲು ಜನರು ಸಮಾಧಾನದಿಂದ ಸಹಕರಿಸಬೇಕು ಎಂದು ಶಾಸಕ ಪ್ರಕಾಶ ಕೋಳಿವಾಡ ಮನವಿ ಮಾಡಿದರು.

ಮಹಿಳೆಯರು ಕೇವಲ ಅಡುಗೆ ಮನೆಗೆ ಹಾಗೂ ಹೊಲ, ಬದುಕಿಗೆ ಸೀಮಿತರಾಗಬಾರದು ಎಂದು ರಾಜ್ಯ ಸಾರಿಗೆಯಲ್ಲಿ ಉಚಿತ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದು, ಹೊರ ಜಿಲ್ಲೆಗಳ ಪರಿಸರ, ಸಾಹಿತ್ಯ, ಸಂಸ್ಕೃತಿ ಅರಿತು ತಮ್ಮ ಬದುಕನ್ನು ವಿಸ್ತರಿಸಿಕೊ ಳ್ಳಬೇಕು. ನಮ್ಮೆಲ್ಲ ಗ್ಯಾರಂಟಿಗಳ ಸದುಪಯೋಗ ಮಾಡಿಕೊಳ್ಳುವಂತೆ ಶಾಸಕರು ಹೇಳಿದರು. ಗ್ರಾ.ಪಂ ಅಧ್ಯಕ್ಷೆ ನೀಲಮ್ಮ ಪೂಜಾರ, ಕಾಂಗ್ರೆಸ್ ಮುಖಂಡ ಎಚ್.ಎಚ್. ಮುಡದ್ಯಾವಣ್ಣನವರ, ಪಿಡಿಓ ಜ್ಯೋತಿ ಕಮ್ಮಾರ, ಉಪಾಧ್ಯಕ್ಷರು, ಸದಸ್ಯರು ಮತ್ತಿತರರಿದ್ದರು. ಶಿಕ್ಷಕ ಕೇಶವ ಬಾರ್ಕಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

error: Content is protected !!