ಜಗಳೂರು : ಬೇಸಿಗೆ ಹಂಗಾಮಿನಲ್ಲಿ ಬೀಜೋತ್ಪಾದನೆ ಮಾಡಿ ಹೆಚ್ಚು ಆದಾಯ ಗಳಿಸಬಹುದು

ಜಗಳೂರು : ಬೇಸಿಗೆ ಹಂಗಾಮಿನಲ್ಲಿ ಬೀಜೋತ್ಪಾದನೆ ಮಾಡಿ ಹೆಚ್ಚು ಆದಾಯ ಗಳಿಸಬಹುದು

ಜಗಳೂರು, ಏ. 18 –  ತಾಲ್ಲೂಕಿನ ಸಿದ್ದಮ್ಮನಹಳ್ಳಿ ಗ್ರಾಮದಲ್ಲಿ ರಾಷ್ಟ್ರೀಯ ಎಣ್ಣೆ ಕಾಳು ಯೋಜನೆ ಅಡಿಯ ಗುಚ್ಚ ಗ್ರಾಮಗಳ ಮುಂಚೂಣಿ ಪ್ರಾತ್ಯಕ್ಷಿಕೆ  ಶೇಂಗಾ ಬೆಳೆಯ ಕ್ಷೇತ್ರೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.

ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ತಜ್ಞ ಬಿ.ಓ. ಮಲ್ಲಿಕಾರ್ಜುನ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಶೇಂಗಾ ಪ್ರಮುಖವಾದ ಎಣ್ಣೆ ಕಾಳು ಬೆಳೆ, ನವೀನ ತಳಿಗಳಾದ G2-52 ಈ ಭಾಗದಲ್ಲಿ ಹೆಚ್ಚು ಬೆಳೆಯಲಾಗುತ್ತಿದ್ದು, ರೈತರು ಬೇಸಿಗೆ ಹಂಗಾಮಿನಲ್ಲಿ ಬೀಜೋದ್ಪಾದನೆ ಮಾಡಿ ಹೆಚ್ಚು ಆದಾಯವನ್ನು ಗಳಿಸಬಹುದು ಹಾಗೂ ಹೈನುಗಾರಿಕೆ ಮಾಡುವ ರೈತರಿಗೆ ಶೇಂಗಾದ ಹಸಿರು ಮೇವು ಹಾಗೂ ಒಣಗಿದ ಹೊಟ್ಟು ಕೂಡ ಸಿಗುತ್ತದೆ ಎಂದರು.

ಸಸ್ಯ ಸಂರಕ್ಷಣಾ ತಜ್ಞರಾದ ಡಾ. ಅವಿನಾಶ್ ಟಿ.ಜಿ ರವರು ಸರಿಯಾದ ಸಮಯಕ್ಕೆ ನೀರು, ಗೊಬ್ಬರ ಹಾಗೂ ಕೀಟಗಳ ನಿರ್ವಹಣೆ ಮಾಡಿದರೆ ಅಧಿಕ ಇಳುವರಿ ಪಡೆಯ ಬಹುದು ಎಂದರು. ಪ್ರಗತಿಪರ ರೈತರಾದ ಬಸವರಾಜ್ ಮಾತನಾಡುತ್ತಾ ಶೇಂಗಾ ಬೆಳೆಯು, ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ಮಾರ್ಗದರ್ಶನದಲ್ಲಿ ಉತ್ತಮವಾಗಿ ಬಂದಿದ್ದು, ವಾತಾವರಣದ ವೈಫಲ್ಯದಿಂದ ಇಳುವರಿಯು ಕಡಿಮೆಯಾಗಬಹುದು ಎಂದರು.

ಕಾರ್ಯಕ್ರಮದಲ್ಲಿ ಸಿದ್ದಮ್ಮನಹಳ್ಳಿಯ ಮುಂಚೂಣಿ ಪ್ರಾತ್ಯಕ್ಷಿಕೆ ರೈತರು ಭಾಗವಹಿಸಿದ್ದರು.

error: Content is protected !!