ಕಂದಾಯ ಇಲಾಖಾಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಡಿ.ಜಿ.ಶಾಂತನಗೌಡ ಎಚ್ಚರಿಕೆ
ನ್ಯಾಮತಿ, ಜೂ.26- ಹಿಂದಿನ ಸರ್ಕಾ ರದ ಅವಧಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು, ನನ್ನ ಅವಧಿಯಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಬೇಕು ಇಲ್ಲದಿದ್ದರೆ, ಸೂಕ್ತ ಕ್ರಮ ಜರುಗಿಸಲಾಗು ವುದು ಎಂದು ಶಾಸಕ ಡಿ.ಜಿ.ಶಾಂತನಗೌಡ ಎಚ್ಚರಿಕೆ ನೀಡಿದರು.
ತಾಲ್ಲೂಕಿನ ತೀರ್ಥರಾಮೇಶ್ವರದ ಯುವ ಜನ ವಸತಿ ನಿಲಯದಲ್ಲಿ ಅವಳಿ ತಾಲ್ಲೂಕಿನ ಕಂದಾಯ ಇಲಾಖಾಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಹಿಂದಿನ ಅವಧಿಯಲ್ಲಿ ಕಂಡೂ ಕೇಳರಿ ಯದ ಭ್ರಷ್ಟಾಚಾರ, ಸ್ವಜನ-ಪಕ್ಷ ಪಾತ, ದುರಾಡಳಿತ, ರೈತರ ಬಗ್ಗೆ ನಿರಾಸಕ್ತಿ, ಕಾನೂನು ಪ್ರಕಾರ ದಾಖಲೆಗಳು ಸರಿಯಿ ದ್ದರೂ ವಿನಾಕಾರಣ ಕೆಲಸ ಮಾಡಿಕೊಡಲು ವಿಳಂಬ ಮಾಡಿರುವುದು ಗಮನಕ್ಕೆ ಬಂದಿದೆ. ಇವು ನಮ್ಮ ಸರ್ಕಾರದ ಅವಧಿಯಲ್ಲಿ ಮರು ಕಳಿಸಬಾರದು ಎಂದು ಸೂಚನೆ ನೀಡಿದರು.
ನಾನು ಸೂಚನೆ ನೀಡಿದ ಮೇಲೂ ಯಾವುದೇ ಅಧಿಕಾರಿಗಳು ತಪ್ಪು ಮಾಡಿದ್ದು ಕಂಡು ಬಂದರೆ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕಾಗುತ್ತದೆ. ಹಾಗಾಗಿ ಅಧಿಕಾರಿಗಳು ಜಾಗೃತೆಯಿಂದ ಕೆಲಸ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಹೆಣ್ಣು ಮಕ್ಕಳು ತವರು ಮನೆಗೆ ಹೋಗುವಂತೆ ರೈತರು ತಮ್ಮ ಕೆಲಸವಿದ್ದಾಗ ಮಾತ್ರವೇ ಕಂದಾಯ ಇಲಾಖೆಗೆ ಬರುತ್ತಾರೆ. ಇನ್ನು ಮುಂದೆ ಅಧಿಕಾರಿಗಳು ರೈತರಿಗೆ ಸಮಯಕ್ಕೆ ಸರಿಯಾಗಿ ಅವರ ಕೆಲಸ ಮಾಡಿಕೊಡಬೇಕು. ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಕಾರ್ಯ ನಿರ್ವಹಿಸಲೇಬೇಕು. ಮಳೆ ಹಾನಿ ಮತ್ತು ಬೆಳೆ ಹಾನಿಗೆ ಸಂಬಂಧಿಸಿದ ಅರ್ಜಿಗಳನ್ನೂ ವಿನಾಕಾರಣ ಪೆಂಡಿಂಗ್ ಇಡದೇ, ಭ್ರಷ್ಟಾಚಾರಕ್ಕೆ ಆಸ್ಪದ ಕೊಡದೇ ಸಮಯಕ್ಕೆ ಸರಿಯಾಗಿ ಅರ್ಜಿಗ ಳನ್ನು ವಿಲೇ ಮಾಡುವಂತೆ ಸೂಚಿಸಿದರು.
ಸರ್ವೇ ಇಲಾಖೆಯವರ ಮೇಲೂ ಸಾಕಷ್ಟು ವಿಳಂಬ ಧೋರಣೆಯ ದೂರುಗಳು ಕೇಳಿಬಂದಿದ್ದು ಇನ್ನು ಮುಂದೆ ಸಮಯಕ್ಕೆ ಸರಿಯಾಗಿ ಕೆಲಸ ನಿರ್ವಹಣೆ ಮಾಡಬೇಕು ಎಂದು ಸಲಹೆ ನೀಡಿದರು.
ಆದಷ್ಟು ಬೇಗ ಬಗರ್ ಹುಕ್ಕುಂ ಸಮಿತಿ ರಚನೆ ಮಾಡಿ ಅರ್ಹರಿಗೆ ನ್ಯಾಯ ಒದಗಿಸ ಲಾಗುವುದು ಎಂದು ಮಾಹಿತಿ ನೀಡಿದರು.
ಅವಳಿ ತಾಲ್ಲೂಕಿನ ಅಧಿಕಾರಿಗಳ ಸಭೆ ಯಲ್ಲಿ ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ, ಭೂ-ಮಾಪನ ಇಲಾಖೆಯ ಅಧಿಕಾರಿ ಸುರೇಶ್, ಹೊನ್ನಾಳಿ ತಹಶೀಲ್ದಾರ್ ತಿರುಪತಿ ಪಾಟೀಲ್, ಗ್ರೇಡ್-2 ತಹಶೀ ಲ್ದಾರ್ ಸುರೇಶ್‍ನಾಯ್ಕ್, ಉಪ-ತಹಶೀಲ್ದಾರ್‍ಗಳಾದ ಎ.ಕೆ.ಚಂದ್ರಪ್ಪ, ಮಂಜುನಾಥ್ ಇಂಗಳಗೊಂದಿ, ರಾಜಸ್ವ ನಿರೀಕ್ಷಕರಾದ ದಿನೇಶ್ ಬಾಬು, ಗುರು ಪ್ರಸಾದ್, ಜಯಪ್ರಕಾಶ್, ನ್ಯಾಮತಿ ತಹಶೀ ಲ್ದಾರ್ ಆರ್.ವಿ.ಕಟ್ಟಿ, ಗ್ರೇಡ್-2 ತಹಶೀ ಲ್ದಾರ್ ಎ.ಸಿ.ನಂದ್ಯಪ್ಪ, ಆರ್.ಆರ್.ಶಿರಸ್ತೇ ದಾರ್ ಕೆಂಚಮ್ಮ, ಚುನಾವಣಾ ಶಿರಸ್ತೇದಾರ್ ಚಂದ್ರಶೇಖರ್, ರಾಜಸ್ವ ನಿರೀಕ್ಷಕರಾದ ಸಂತೋಷ್, ಸುಧೀರ್, ಎಫ್.ಡಿ.ಎ.ಧನುಷ್ ಮತ್ತಿತರರು ಇದ್ದರು.