ನ್ಯಾಮತಿಯಲ್ಲಿ ನೂತನ ಶಾಸಕ ಡಿ.ಜಿ.ಶಾಂತನಗೌಡ ಭರವಸೆ
ಹೊನ್ನಾಳಿ, ಜೂ. 4- ನ್ಯಾಮತಿ ತಾಲ್ಲೂಕಿನಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದು ನೂತನ ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.
ಭಾನುವಾರ ನ್ಯಾಮತಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಪದಾಧಿಕಾರಿಗಳು ಗೊಲ್ಲರಹಳ್ಳಿಯ ಅವರ ಗೃಹ ಕಚೇರಿಯಲ್ಲಿ ಕಸಾಪ ವತಿಯಿಂದ ಸನ್ಮಾನಿಸಿದಾಗ, ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ನ್ಯಾಮತಿ ಪಟ್ಟಣದಲ್ಲಿ ಶಾಸಕರ ಕಚೇರಿಯನ್ನು ತೆರೆದು ವಾರದಲ್ಲಿ ಎರಡು ದಿನ ತಾಲ್ಲೂಕಿನ ಸಾರ್ವಜನಿಕರ ಅಹವಾಲು ಸ್ವೀಕರಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಮಂಜುನಾಥ ಕುರ್ಕಿ, ತಾಲ್ಲೂಕು ಕಸಾಪ ಅಧ್ಯಕ್ಷ ಡಿ.ಎಂ.ಹಾಲಾರಾಧ್ಯ, ನಿಕಟ ಪೂರ್ವ ಅಧ್ಯಕ್ಷ ಜಿ.ನಿಜಲಿಂಗಪ್ಪ, ಗೌರವ ಕಾರ್ಯದರ್ಶಿಗಳಾದ ಎಸ್.ಜಿ.ಬಸವರಾಜಪ್ಪ, ಬಿ.ಜಿ. ಚೈತ್ರಾ, ಸಂಘಟನಾ ಕಾರ್ಯದರ್ಶಿ ಎಂ.ಎಸ್.ಜಗದೀಶ, ಬೆಳಗುತ್ತಿ ಹೋಬಳಿ ಕಸಾಪ ಅಧ್ಯಕ್ಷ ಎಂ.ಜಿ. ಕವಿರಾಜ, ನಿರ್ದೇಶಕರಾದ ಎಂ.ಲೋಕೇಶ್ವರಯ್ಯ, ಮುರುಡಪ್ಪ, ಚಂದ್ರೇಗೌಡ, ವೆಂಕಟೇಶನಾಯ್ಕ, ಜಂಗ್ಲಿ ಚಂದನ, ಸೈಯದ್ ಅಕ್ಬರ್ ಬಾಷ, ಪಾಲಾಕ್ಷಪ್ಪ, ಮಹಿಳಾ ನಿರ್ದೇಶಕಿ ಭಾಗ್ಯಲಕ್ಷ್ಮಿ, ಆಚೆಮನೆ ತಿಪ್ಪೇಸ್ವಾಮಿ, ಹೊನ್ನಾಳಿ ಕಸಾಪ ನಿಕಟಪೂರ್ವ ಅಧ್ಯಕ್ಷ ಎಂ.ಎಸ್.ರೇವಣಪ್ಪ ಇದ್ದರು.