ಮನೋರಂಜನೆಯಲ್ಲಿರುವ ಆಸಕ್ತಿ ಪರೀಕ್ಷೆಯಲ್ಲೂ ಇರಬೇಕು

ಮನೋರಂಜನೆಯಲ್ಲಿರುವ ಆಸಕ್ತಿ ಪರೀಕ್ಷೆಯಲ್ಲೂ ಇರಬೇಕು

ಬಾಪೂಜಿ ಹೈಟೆಕ್ ಎಜುಕೇಶನ್‌ನ ಎಥ್ನಿಕ್ ಡೇ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಅಥಣಿ ವೀರಣ್ಣ ಕಿವಿಮಾತು

ದಾವಣಗೆರೆ, ಜೂ.4- ವಿದ್ಯಾರ್ಥಿಗಳು ಎಥ್ನಿಕ್ ಡೇ ಮುಂತಾದ ಸಾಂಸ್ಕೃತಿಕ ಕಾರ್ಯ ಕ್ರಮಗಳ ಮನೋರಂಜನೆಯಲ್ಲಿ ತೋರು ವಷ್ಟು ಆಸಕ್ತಿಯನ್ನು ಪರೀಕ್ಷೆಯಲ್ಲೂ ತೋರ ಬೇಕು. ಆ ಮೂಲಕ ವಿಶ್ವವಿದ್ಯಾನಿಲಯದ ಹತ್ತಕ್ಕೆ ಹತ್ತೂ ರಾಂಕ್‌ಗಳನ್ನು ಕಾಲೇಜಿಗೆ ತಂದು ಕೊಡುವಂತಾಗಬೇಕು ಎಂದು ಹಿರಿಯ ಕೈಗಾರಿಕೋದ್ಯಮಿ ಅಥಣಿ ಎಸ್.ವೀರಣ್ಣ ವಿದ್ಯಾರ್ಥಿಗಳಿಗೆ ಕರೆಕೊಟ್ಟರು. 

ನಗರದ ಬಾಪೂಜಿ ಮ್ಯಾನೇಜ್ಮೆಂಟ್ ಕಾಲೇಜಿನ ಆವರಣದಲ್ಲಿ ನಿನ್ನೆ ಏರ್ಪಾಡಾಗಿದ್ದ ಬಾಪೂಜಿ ಇನ್‌ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಷನ್‌ನ ವಿದ್ಯಾರ್ಥಿಗಳ ಎಥ್ನಿಕ್ ಡೇ ಉದ್ಘಾಟಿಸಿ ಅವರು ಮಾತನಾಡಿದರು.

 ಇಂತಹ ದಿನಾಚರಣೆಯ ಮೂಲಕ ನಮ್ಮ ಸಾಂಪ್ರದಾಯಿಕವಾದ ಉಡುಗೆ – ತೊಡುಗೆ, ಜಾನಪದೀಯವಾದ ರೀತಿ ರಿವಾಜುಗಳ ಪುನರಾವಲೋಕನಕ್ಕೆ ಕಾರಣವಾಗುವಂತಿದ್ದು, ವಿದ್ಯಾರ್ಥಿಗಳಲ್ಲಿ ಪಾರಂಪರಿಕ ವಿಧಾನದ ಪ್ರತಿಪಾದನೆ ಮತ್ತು ವಿನಿಮಯಕ್ಕೂ, ಸ್ನೇಹ ವೃದ್ಧಿಗೂ  ಕಾರಣವಾಗುತ್ತದೆ ಎಂದ ವೀರಣ್ಣನವರು, ಇದು ನಿಮ್ಮ ಮುಂದಿನ ಶೈಕ್ಷಣಿಕ ಚಟುವಟಿಕೆಗಳಿಗೆ ಸ್ಫೂರ್ತಿದಾಯಕ ವಾಗಿರಲಿ ಎಂದು ಆಶಿಸಿದರು.

ಶಿಕ್ಷಣ ಸಂಸ್ಥೆಯ ನಿರ್ದೇಶಕ ಡಾ. ಸ್ವಾಮಿ ತ್ರಿಭುವನಾನಂದ, ಪ್ರಾಂಶುಪಾಲ ಡಾ. ಬಿ.ವೀರಪ್ಪ ಭಾಗವಹಿಸಿದ್ದ ಕಾರ್ಯಕ್ರಮದ ನಿರೂಪಣೆಯನ್ನು ಸಂಜನಾ ಮತ್ತು ಧನ್ಯಾ ಮಾಡಿದರೆ, ಜಾನಪದ ಗೀತೆಗಳನ್ನು ಸಮದ್ವಿತಾ ಮತ್ತು ತಂಡದವರು ಹಾಡಿದರು. ಸಾಂಪ್ರ ದಾಯಿಕ ಉಡುಗೆ – ತೊಡುಗೆಗಳೊಂದಿಗೆ ವಿದ್ಯಾರ್ಥಿ – ವಿದ್ಯಾರ್ಥಿನಿಯರು ನಂದಿಧ್ವಜ, ಗಗ್ಗರಣೆ, ಡೋಲು ಮುಂತಾದ ಜಾನಪದ ವಾದ್ಯಗಳಿಗೆ ಹೆಜ್ಜೆ ಹಾಕಿ ನೃತ್ಯ ಮಾಡಿದರು.

error: Content is protected !!