ಯೋಗ ಬಲದಿಂದ ಸಮಸ್ಯೆ ಎದುರಿಸುವ ಶಕ್ತಿ

ಯೋಗ ಬಲದಿಂದ ಸಮಸ್ಯೆ ಎದುರಿಸುವ ಶಕ್ತಿ

ಹರಪನಹಳ್ಳಿ ಕಾರ್ಯಕ್ರಮದಲ್ಲಿ ಕನ್ನಡ ಉಪನ್ಯಾಸಕ ಎಚ್. ಮಲ್ಲಿಕಾರ್ಜುನ ಅಭಿಮತ

ಹರಪನಹಳ್ಳಿ, ಜೂ. 23 – ಯೋಗ ಮಾಡುವವನು ಎಂತಹ ಸಮಸ್ಯೆ, ಸವಾಲುಗಳೇ ಬಂದರೂ ಎದುರಿಸುವ ಶಕ್ತಿ ಬರುತ್ತದೆ ಎಂದು ಎಸ್.ಯು.ಜೆ. ಎಂ. ಕಾಲೇಜಿನ ಕನ್ನಡ ಉಪನ್ಯಾಸಕ ಎಚ್. ಮಲ್ಲಿಕಾರ್ಜುನ ಅಭಿಪ್ರಾಯಪಟ್ಟರು.

ಪಟ್ಟಣದ ಶಿಕ್ಷಣ ಮಹಾವಿದ್ಯಾಲಯ ಮತ್ತು ಬಂಗಿ ಬಸಪ್ಪ ಕಾಲೇಜಿನ ವಿದ್ಯಾರ್ಥಿಗಳಿಗೆ ಫಾರ್ಮಸಿ ಕಾಲೇಜಿನ ಸಭಾಂಗಣದಲ್ಲಿ ಯೋಗ ತರಬೇತಿ ನೀಡಿ ಅವರು ಮಾತನಾಡಿದರು.

ಯೋಗ ಮತ್ತು ಪ್ರಾಣಾಯಾಮದಿಂದ ದೇಹದ ಎಲ್ಲಾ ನಾಡಿಗಳು ಬಲಿಷ್ಠ ಹೊಂದುತ್ತವೆ. ಹೃದಯಾಘಾತ, ಸಕ್ಕರೆ ಖಾಯಿಲೆ, ಬಿ.ಪಿ. ನಿಯಂತ್ರಿಸುತ್ತದೆ. ವಿದ್ಯಾರ್ಥಿಗಳು ಸದಾ ಕ್ರಿಯಾಶೀಲತೆ ಮತ್ತು ಚಟುವಟಿಕೆಯಿಂದ ಕೆಲಸ ಮಾಡಲು ಯೋಗ ಉತ್ತೇಜನ ನೀಡುತ್ತದೆ. ಎಷ್ಟೇ ಕೆಲಸ ಮಾಡಿದರೂ ಆಯಾಸ, ಸುಸ್ತು ಹೊಂದುವುದಿಲ್ಲ. ನಮ್ಮ ಎಲ್ಲಾ ಖಾಯಿಲೆಗಳಿಗೆ ಯೋಗ ಮದ್ದಾಗಿದೆ. ಮಹಿಳೆಯರ ಅನೇಕ ಸಮಸ್ಯೆಗಳಿಗೆ ಯೋಗ ಪರಿಹಾರವನ್ನು ನೀಡುತ್ತದೆ. ದೈಹಿಕ ಮತ್ತು ಮಾನಸಿಕ ಸ್ವಾಸ್ಥತೆಯನ್ನು ಕಾಪಾಡಲು ಯೋಗ ಸಹಕಾರಿ. ಮುಖದ ಕಾಂತಿಯನ್ನು ಹೆಚ್ಚಿಸಿ ಯೌವನ ಸ್ಥಿತಿಯನ್ನು ಸ್ಥಿರವಾಗಿಡುತ್ತದೆ. ಏಕಾಗ್ರತೆಯಿಂದ ಒತ್ತಡವನ್ನು ಕಡಿಮೆ ಮಾಡಿ ಮಾನಸಿಕ ನೆಮ್ಮದಿಯನ್ನು ನೀಡುತ್ತದೆ ಎಂದರು.

ಯೋಗ ತರಬೇತಿ ಕಾರ್ಯಕ್ರಮದಲ್ಲಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಟಿ.ಎಂ. ರಾಜಶೇಖರ, ಬಂಗಿ ಬಸಪ್ಪ, ಕಾಲೇಜಿನ ಪ್ರಾಚಾರ್ಯರಾದ ಅರುಣ್ ಕುಮಾರ್ ಮತ್ತು ಇತರರು ಭಾಗವಹಿಸಿದ್ದರು. 

error: Content is protected !!