ಹರಪನಹಳ್ಳಿ : ಆತ್ಮಹತ್ಯೆಗೊಳಗಾದ ಉಪನ್ಯಾಸಕರ ಕುಟುಂಬಗಳಿಗೆ ನೆರವು

ಹರಪನಹಳ್ಳಿ, ಜು.11- ರಾಜ್ಯದಲ್ಲಿ ಆತ್ಮಹತ್ಯೆಗೆ ಶರಣಾದ ಉಪನ್ಯಾಸಕರ ಕುಟುಂಬಗಳಿಗೆ ಪದವಿ ಪೂರ್ವ ಕಾಲೇಜುಗಳ ಸಂಘದ ವತಿಯಿಂದ ನೆರವು ನೀಡುವ ತೀರ್ಮಾನ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಪದವಿ ಪೂರ್ವ ಉಪನ್ಯಾಸಕರ ಸಂಘದ ಗೌರವಾಧ್ಯಕ್ಷ ತಿಮ್ಮಯ್ಯ ಪುರ್ಲೆ ತಿಳಿಸಿದರು.

ಪಟ್ಟಣದ ಹೊರವಲಯದಲ್ಲಿರುವ ಸಮತಾ ರೆಸಾರ್ಟ್‌ನಲ್ಲಿ ನಿನ್ನೆ   ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದ ಎಲ್ಲಾ ಉಪನ್ಯಾಸಕರುಗಳ ಒಂದು ದಿನದ ವೇತನವನ್ನು ಆತ್ಮಹತ್ಯೆಗೆ ಶರಣಾದ ಉಪನ್ಯಾಸಕ ಕುಟುಂಬಗಳಿಗೆ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಪದವಿ ಕಾಲೇ ಜಿನ ಅಧ್ಯಾಪಕರ ಸಂಘ, ಶಿಕ್ಷಕರ ಸಂಘ, ಅತಿಥಿ ಉಪನ್ಯಾ ಸಕರು ಸಹ ನೆರವಿಗೆ ಬರಬೇಕೆಂದು ಮನವಿ ಮಾಡಿದರು.

ಲಾಕ್‌ಡೌನ್ ಪರಿಣಾಮವಾಗಿ ಮಂಡ್ಯದ ಮಳವಳ್ಳಿ, ಗಂಗಾವತಿ, ಚಾಮರಾಜನಗರ ಮುಂತಾದೆಡೆ ಅತಿಥಿ ಉಪನ್ಯಾಸಕರು ಸರಣಿ ಆತ್ಮಹತ್ಯೆಗೆ ಶರಣಾಗಿರುವುದು,  ಕಿಡ್ನಿ ವೈಫಲ್ಯದಿಂದ ಅಂಬರೀಶ್ ಹಾಲ್ಕೋಡ್, ನಾಗೇಂದ್ರ ಬಸವರಾಜ ಕಟ್ಟಿಮನಿ ಇನ್ನಿತರರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕೂಡಲೇ ಸರ್ಕಾರ ಪರಿಹಾರ ಮತ್ತು ವಿಶೇಷ ಪ್ಯಾಕೇಜ್ ನೀಡುವದರ ಮೂಲಕ ಸೇವಾ ಭದ್ರತೆಯನ್ನು ಒದಗಿಸಿಕೊಡಬೇಕೆಂದು ಆಗ್ರಹಿಸಿದರು.

ಹರಪನಹಳ್ಳಿ ಅತಿಥಿ ಉಪನ್ಯಾಸಕರ ಸಂಘದ ಸಂಚಾಲಕ ಶಿವಕುಮಾರ ಬಾಗಳಿ ಮಾತನಾಡಿ,  ಆತ್ಮಹತ್ಯೆ ಮಾಡಿಕೊಂಡಿರುವ ಉಪನ್ಯಾಸಕರ ಕುಟುಂಬದ ನೆರವಿಗೆ ಧಾವಿಸುವಂತೆ ಕೆಲವು ವಿಧಾನ ಪರಿಷತ್  ಸದಸ್ಯರಿಗೆ ಮನವಿ ಸಲ್ಲಿಸಿದ್ದರೂ ನಿರ್ಲಕ್ಷ್ಯ ವಹಿಸಿರುವುದು ದುಃಖದ ಸಂಗತಿ ಎಂದರು. 

ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ನಮ್ಮ ಕರೆಗೆ ಸ್ಪಂದಿಸಿ ಅಗತ್ಯ ಸಹಕಾರ ನೀಡುತ್ತೇನೆ. ರಾಜ್ಯ ಮಟ್ಟದ ಹೋರಾಟಗಳಲ್ಲಿ ನಮ್ಮೊಂದಿಗಿರುವುದಾಗಿ ತಿಳಿಸಿದ್ದಾರೆ ಎಂದರು. 

ಉಪನ್ಯಾಸಕರಾದ ಎಂ. ಪ್ರಭಾಕರ್, ಡಾ.ಎಂ. ಸುರೇಶ್, ನವಾಜ್ ಬಾಷಾ, ಬಿ.ಹೆಚ್. ಕೊಟ್ರಯ್ಯ, ಎಂ. ಬಸವರಾಜ, ಲಿಂಗಾನಾಯ್ಕ, ಮಾಳ್ಗಿ ಮಂಜುನಾಥ್, ಟಿ. ಶಫೀವುಲ್ಲಾ ಇನ್ನಿತರರಿದ್ದರು.

error: Content is protected !!