ರಾಣೇಬೆನ್ನೂರು, ಜು.8- ನಗರದ ವಿವಿಧ ಕಡೆಗಳಲ್ಲಿ ಬುಧವಾರದಂದು ಒಂದೇ ದಿನ ಮೂರು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಜನರನ್ನು ಮತ್ತಷ್ಟು ಭಯಭೀತರನ್ನಾಗಿಸಿದೆ. ಪ್ರಕರಣಗಳು ಕಂಡು ಬಂದ ಪ್ರದೇಶಗಳನ್ನು ಸೀಲ್ಡೌನ್ ಮಾಡಲಾಗಿದೆ.
ನಗರದ ವಾಗೀಶ ನಗರ 6ನೇ ಕ್ರಾಸ್ನಲ್ಲಿ 36 ಮನೆಗಳಿದ್ದು, 91 ಜನರಿದ್ದಾರೆ. ಮೃತ್ಯುಂಜಯ ನಗರ 11ನೇ ಕ್ರಾಸ್ನಲ್ಲಿ 20 ಮನೆಗಳಿದ್ದು, 80 ಜನರಿದ್ದಾರೆ. ಮೃತ್ಯುಂಜಯ ನಗರ, ಹನುಮಂತ ದೇವರ ಗುಡಿಯ ಬಳಿ 32 ಮನೆಗಳಲ್ಲಿ 157 ಜನರಿದ್ದು, ಎಲ್ಲರನ್ನೂ ಹೋಂ ಕ್ವಾರಂಟೈನ್ಗೆ ಒಳಪಡಿಸಲಾಗಿದೆ. ಈ ಮೂರೂ ಪ್ರದೇಶಗಳಲ್ಲಿನ ಪ್ರತಿಯೊಂದು ಮನೆಗೂ ಸ್ಯಾನಿಟೈಸ್ ಮಾಡಲಾಗಿದೆ. ತಹಶೀಲ್ದಾರ್ ಬಸನಗೌಡ ಕೊಟ್ಟೂರು ಸೀಲ್ಡೌನ್ ಪ್ರದೇಶಗಳಿಗೆ ಭೇಟಿ ನೀಡಿ, ಅಲ್ಲಿನ ಪರಿಸ್ಥಿತಿ ಅವಲೋಕಿಸಿದರು.