ಕದಳಿ ವೇದಿಕೆಯಿಂದ ಕದಳಿ ಕಮ್ಮಟ, ವಾಟ್ಸಾಪ್ ದತ್ತಿ ಉಪನ್ಯಾಸ

ದಾವಣಗೆರೆ, ಅ. 1- ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಹಾಗೂ ಕದಳಿ ಮಹಿಳಾ ವೇದಿಕೆ ತಾಲ್ಲೂಕು ಘಟಕದ ವತಿಯಿಂದ ಮೊನ್ನೆ ಬುಧವಾರ 117ನೇ ಕದಳಿ ಕಮ್ಮಟ ಹಾಗೂ ದತ್ತಿ ಉಪನ್ಯಾಸ ವಾಟ್ಸಾಪ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ವನಿತಾ ಸಾಹಿತ್ಯ ವೇದಿಕೆಯ ಅಧ್ಯಕ್ಷರೂ, ನಿವೃತ್ತ ಉಪನ್ಯಾಸಕರೂ ಆದ ಎಸ್.ಎಂ. ಮಲ್ಲಮ್ಮ ಅವರು ಆಂತರಿಕ ಮತ್ತು ಬಾಹ್ಯ ಸೌಂದರ್ಯ-ಪ್ರಸ್ತುತ ಸಮಾಜಕ್ಕೆ ಶರಣರ ಸಂದೇಶ ವಿಷಯದ ಕುರಿತು ಉಪನ್ಯಾಸ ನೀಡಿದರು.

ಲಿಂ.ಪ್ರೊ.ಬಿ.ಕೆ. ಸಿದ್ದಪ್ಪ ದತ್ತಿ ಕಾರ್ಯಕ್ರಮಕ್ಕೆ ಕದಳಿ ಮಹಿಳಾ ವೇದಿಕೆಯ ಸಲಹಾ ಸಮಿತಿ ಅಧ್ಯಕ್ಷರೂ, ನಿವೃತ್ತ ಪ್ರಾಂಶುಪಾಲರೂ ಆದ ಟಿ.ನೀಲಾಂಬಿಕಾ ಅಧ್ಯಕ್ಷತೆ ವಹಿಸಿದ್ದರು.  ವೇದಿಕೆಯ ಗೌರವಾಧ್ಯಕ್ಷೆ ಜಯಶೀಲಾ ಷಡಾಕ್ಷರಪ್ಪ, ತಾಲ್ಲೂಕು ಘಟಕದ ಅಧ್ಯಕ್ಷೆ ಆಶಾ ಮಹಾಭಲೇಶ್ವರ ಗೌಡ್ರು, ಸಂಸ್ಥಾಪಕ ಅಧ್ಯಕ್ಷೆ ಯಶಾ ದಿನೇಶ್ ಪಾಲ್ಗೊಂಡಿದ್ದರು.

ವೇದಿಕೆಯ ಸಹ ಕಾರ್ಯದರ್ಶಿ ಸೌಮ್ಯ ಸತೀಶ್ ನಿರೂಪಿಸಿದರು. ಗಾಯತ್ರಿ ವಸ್ತ್ರದ್ ದತ್ತಿ ಉಪನ್ಯಾಸಕರನ್ನು ಪರಿಚಯಿಸಿದರು. ಕೆ.ಆರ್. ವಸಂತ ಅಧ್ಯಕ್ಷರನ್ನು ಪರಿಚಯಿಸಿದರು. ಸಾವಿತ್ರಮ್ಮ ಸಿದ್ದಪ್ಪ ತಂಡ ಪ್ರಾರ್ಥಿಸಿದರು. ಆಶಾ ಮಹಾಭಲೇಶ್ವರ ಗೌಡ್ರು ಸ್ವಾಗತಿಸಿದರು. ತಾಲ್ಲೂಕು ಘಟಕದ ಕಾರ್ಯದರ್ಶಿ ರೇಖಾ ಓಂಕಾರಪ್ಪ ವಂದಿಸಿದರು.

error: Content is protected !!