ಮಲೇಬೆನ್ನೂರು ಸಮೀಪದ ಜಿಗಳಿ ಗ್ರಾಮದ ಆರಾಧ್ಯ ದೈವ ಶ್ರೀ ರಂಗನಾಥ ಸ್ವಾಮಿಯ ರಥೋತ್ಸವವು ಇಂದು ತಡರಾತ್ರಿ ಜರುಗಲಿದೆ.
ರಥೋತ್ಸವದ ಅಂಗವಾಗಿ ಇಂದು ಬೆಳಿಗ್ಗೆ 8 ಗಂಟೆಗೆ ಗಜ ಉತ್ಸವ, ಸಂಜೆ 4 ಗಂಟೆಯಿಂದ ಶಸ್ತ್ರ ಕಾರ್ಯಕ್ರಮಗಳು ನಡೆಯಲಿವೆ.
ಇದೇ ದಿನ ತಡರಾತ್ರಿ (ಸೋಮವಾರ ಬೆಳಗಿನ ಜಾವ) ಶ್ರೀ ರಂಗನಾಥ ಸ್ವಾಮಿಯ ರಥೋತ್ಸವವು ಶ್ರೀ ಬೀರಲಿಂಗೇಶ್ವರ ಸ್ವಾಮಿ, ಜಿ. ಬೇವಿನಹಳ್ಳಿಯ ಶ್ರೀ ಆಂಜನೇಯ ಸ್ವಾಮಿ, ಯಲವಟ್ಟಿಯ ಶ್ರೀ ಆಂಜನೇಯ ಸ್ವಾಮಿ ಒಡಗೂಡಿ ಸಕಲ ಬಿರುದಾವಳಿಗಳಿಂದ ಬ್ರಾಹ್ಮೀ ಮುಹೂರ್ತದಲ್ಲಿ ಜರುಗುವುದು. ನಾಳೆ ಸೋಮವಾರ ಸೋಮವಾರ ಬೆಳಿಗ್ಗೆ 10.30 ರಿಂದ ಜವಳ, ಮುದ್ರೆ ಮತ್ತು ಸಂಜೆ ಓಕಳಿ ನಂತರ ಕಂಕಣ ವಿಸರ್ಜನೆ ಮಾಡಲಾಗುವುದು.