ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿಂದು ಗೋಷ್ಠಿ, ಸಾಧಕರಿಗೆ ಸನ್ಮಾನ, ಸಮಾರೋಪ

ಚನ್ನಗಿರಿ ತಾಲ್ಲೂಕು ಹರನಹಳ್ಳಿ-ಕೆಂಗಾಪುರದ ಶ್ರೀ ರಾಮಲಿಂಗೇಶ್ವರ ಮಠದ ಆವರಣದಲ್ಲಿ ನಡೆಯುತ್ತಿರುವ ದಾವಣಗೆರೆ ಜಿಲ್ಲಾ 12 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇಂದು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಬೆಳಿಗ್ಗೆ 9.30 ಕ್ಕೆ ನಾಡು, ನುಡಿ ಗೀತ ಗಾಯನ, ಬೆಳಿಗ್ಗೆ 10 ಕ್ಕೆ ಮೈಸೂರಿನ ಹಿರಿಯ ಸಾಹಿತಿ ಜಯಪ್ಪ ಹೊನ್ನಾಳಿ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದ್ದು, ಜಗಳೂರು ಹಿರಿಯ ಸಾಹಿತಿ ಎನ್.ಟಿ. ಯರ್ರಿಸ್ವಾಮಿ ಆಶಯ ನುಡಿಯಾಡಲಿದ್ದಾರೆ.

ಬೆಳಿಗ್ಗೆ 11.30 ಕ್ಕೆ ವಿಶೇಷ ಉಪನ್ಯಾಸ (ಮಾಲಿಕೆ-4) ನಡೆಯಲಿದ್ದು, ಸ್ವಚ್ಛತೆ, ಆರೋಗ್ಯ ಮತ್ತು ಸೂಕ್ಷ್ಮ ಜೀವಿ ಗಳು ಕುರಿತು ದಾವಣಗೆೆರೆ ವಿವಿ ಸೂಕ್ಷ್ಮ ಜೀವಿಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಎಸ್.ಶಿಶುಪಾಲ್ ಉಪನ್ಯಾಸ ನೀಡುವರು. ಕೆ.ಎಸ್. ಬಸವಂತಪ್ಪ, ಬಸವರಾಜ್ ಶಿವಗಂಗಾ, ಸವಿತಾ ಮಲ್ಲೇಶನಾಯ್ಕ ಭಾಗವಹಿಸಲಿದ್ದಾರೆ.

ಮಧ್ಯಾಹ್ನ 12 ಕ್ಕೆ ಸಾಹಿತ್ಯ ವೈವಿಧ್ಯತೆ ಕುರಿತು ಎರಡನೇ ಗೋಷ್ಠಿ ನಡೆಯಲಿದೆ. ಮೈಸೂರು ಸಾಹಿತಿ ಡಾ.ಅನಸೂಯ ಎಸ್. ಕೆಂಪನಹಳ್ಳಿ ಅಧ್ಯಕ್ಷತೆ ವಹಿಸುವರು.`ಜನಸಾಮಾನ್ಯರಲ್ಲಿ ಸಾಹಿತ್ಯದ ಅಭಿರುಚಿ’ ಕುರಿತು ಪತ್ರಕರ್ತ ಎನ್.ವಿ. ರಮೇಶ್, `ಶರಣರು ಕಟ್ಟಿ ಬಯಸಿದ ಸ್ತ್ರೀ ಸಮಾಜ’ ಕುರಿತು ಶರಣ ಸಾಹಿತ್ಯ ಚಿಂತಕ ಎಂ.ಯು. ಚನ್ನಬಸಪ್ಪ, `ಜಾನಪದ ಸಾಹಿತ್ಯದಲ್ಲಿ  ಮಾನವೀಯ ಮೌಲ್ಯಗಳು’ ಕುರಿತು ಉಪನ್ಯಾಸಕಿ ಡಾ. ಅನಿತಾ ದೊಡ್ಡಗೌಡರ್ ವಿಷಯ ಮಂಡಿಸಲಿದ್ದಾರೆ.

ಮಧ್ಯಾಹ್ನ 2.30 ಕ್ಕೆ ಬಹಿರಂಗ ಅಧಿವೇಶನ ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿ ದೆ. ಗೌರವ ಕೋಶಾಧ್ಯಕ್ಷ ಕೆ. ರಾಘವೇಂದ್ರ ನಾಯರಿ ನಿರ್ಣಯ ಮಂಡಿಸುವರು. ಪರಿಷತ್ ಪದಾಧಿಕಾರಿಗಳಾದ ಬಿ. ದಿಳ್ಳೆಪ್ಪ, ರೇವಣಸಿದ್ಧಪ್ಪ ಅಂಗಡಿ, ಸಿ.ಜಿ. ಜಗದೀಶ್ ಕೂಲಂಬಿ, ಜಿಗಳಿ ಪ್ರಕಾಶ್, ಇ.ಎಂ. ಮಂಜುನಾಥ, ಕೆ.ಎಸ್. ವೀರೇಶ್ ಪ್ರಸಾದ್ ಮತ್ತಿತರರು ಭಾಗವಹಿಸಲಿದ್ದಾರೆ.

ಮಧ್ಯಾಹ್ನ 3 ಗಂಟೆಗೆ ವಿಶೇಷ ಉಪನ್ಯಾಸ (ಮಾಲಿಕೆ- 5) ನಡೆಯಲಿದ್ದು, ಖ್ಯಾತ ವಾಗ್ಮಿ ಪ್ರೊ. ಎಂ. ಕೃಷ್ಣೇಗೌಡ `ಕನ್ನಡ ನುಡಿಯ ಉಳುವಿಗೆ ಗ್ರಾಮೀಣ ಜನರ ಕೊಡುಗೆ’ ಕುರಿತು ಮಾತನಾಡಲಿ ದ್ದಾರೆ. ಮಾಡಾಳ್ ಮಲ್ಲಿಕಾರ್ಜುನ್, ಕೆ.ಎಂ. ಸುರೇಶ್, ಜಿ.ಎಸ್. ಶ್ಯಾಮ್ ಮತ್ತಿತರರು ಭಾಗವಹಿಸಲಿದ್ದಾರೆ.

ಸಂಜೆ 4 ಗಂಟೆಗೆ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಜಾನಪದ ತಜ್ಞ ಡಾ.ಎಂ.ಜಿ. ಈಶ್ವರಪ್ಪ ಅಧ್ಯಕ್ಷತೆ ವಹಿಸುವರು. ಜಿ.ಪಂ. ಸಿಇಓ ಡಾ. ಎ. ಚನ್ನಪ್ಪ ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ದಾವಣಗೆರೆ ವಿವಿ ಉಪ ಕುಲಪತಿ ಡಾ.ಬಿ.ಡಿ. ಕುಂಬಾರ ಸಾಧಕರನ್ನು ಸನ್ಮಾನಿಸುವರು. ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ, ನಿಕಟಪೂರ್ವ ಸಂಚಾಲಕ ಕೆ. ಸಿರಾಜ್ ಅಹಮದ್ ಭಾಗವಹಿಸಲಿದ್ದಾರೆ.

ಸಂಜೆ 6.30 ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಸಂಜೆ 5.30 ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ.

ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಅಧ್ಯಕ್ಷತೆ ವಹಿಸುವರು. ರಾಜ್ಯ ಸಾಹಿತ್ಯ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಡಾ.ಬಿ.ವಿ. ವಸಂತಕುಮಾರ್ ಸಮಾರೋಪ ಭಾಷಣ ಮಾಡುವರು. ಜಾನಪದ ಕಲಾವಿದ, ಸರ್ವಾಧ್ಯಕ್ಷ ಯುಗಧರ್ಮ ರಾಮಣ್ಣ ಸಮ್ಮೇಳನಾಧ್ಯಕ್ಷರ ನುಡಿಗಳನ್ನಾ ಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕರಾದ ಎಂ.ಪಿ. ರೇಣುಕಾಚಾರ್ಯ, ಎಸ್. ರಾಮಪ್ಪ, ಯುವ ಮುಖಂಡ ನಿಖಿಲ್ ಕೊಂಡಜ್ಜಿ ಮತ್ತಿತರರು ಭಾಗವಹಿಸಲಿದ್ದಾರೆ. 

error: Content is protected !!