ದಾವಣಗೆರೆ, ಫೆ.3- ನಗರದ ಮೈಕ್ರೋಬಿ ಫೌಂಡೇ ಷನ್ ಹಾಗೂ ಯು. ಎಸ್.ಕಮ್ಯುನಿಕೇಷನ್ ಸಹ ಯೋಗ ದೊಂದಿಗೆ ಇಲ್ಲಿನ ಹೈಸ್ಕೂಲ್ ಮೈದಾನದಲ್ಲಿ ಹಮ್ಮಿಕೊಂಡಿರುವ ಕೃಷಿಮೇಳದಲ್ಲಿ ನಾಳೆ ಬೆಳಗ್ಗೆ 10 ಕ್ಕೆ ರೈತ ಹೋರಾಟಗಾರರು ಮತ್ತು ಪ್ರಗತಿಪರ ಕೃಷಿಕರೊಂದಿಗೆ ಸಂವಾದ ಜರುಗಲಿದೆ. ಈ ಸಂವಾದ ಕಾರ್ಯಕ್ರಮದಲ್ಲಿ ರೈತ ಮುಖಂಡರುಗಳಾದ ಬಲ್ಲೂರು ರವಿಕುಮಾರ್, ಹೊನ್ನೂರು ಮುನಿಯಪ್ಪ, ಹೆಮ್ಮೆ ಮುರುಗೇಶಪ್ಪ ಸ್ವ-ಸಹಾಯ ಸಂಘದ ರತ್ನಮ್ಮ ನಿಟ್ಟೂರು ಸರೋಜಮ್ಮ ದಿದ್ದಿಗೆ ಜಯಶ್ರೀ ಭಾಗವಹಿಸಲಿದ್ದಾರೆ. ನಾಳೆ ಮಧ್ಯಾಹ್ನ 2 ಕ್ಕೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಆಗಮಿಸ ಲಿದ್ದಾರೆ. ಅವರೊಂದಿಗೆ ಮೈಕ್ರೋಬಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಕೆ.ಆರ್.ಹುಲ್ಲುನಾಚೇ ಗೌಡ ಕೃಷಿ ಮೇಳದಲ್ಲಿ ಭಾಗವಹಿಸಿ, ರೈತರೊಂದಿಗೆ ಮಾತನಾಡಲಿದ್ದಾರೆ ಎಂದು ಮೈಕ್ರೋಬಿ ಫೌಂಡೇಶನ್ ಜಿಲ್ಲಾ ಸಂಚಾಲಕರು ಹಾಗೂ ಸಾವಯವ ಕೃಷಿ ಸಲಹೆಗಾರ ಮಹದೇವಪ್ಪ ದಿದ್ದಿಗೆ ಮಾಹಿತಿ ನೀಡಿದ್ದಾರೆ.
January 19, 2025