8ಕ್ಕೆ ಪಂಚಮಸಾಲಿ ಪೂರ್ವಭಾವಿ ಸಭೆ
ದಾವಣಗೆರೆ, ಡಿ.6- ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಹಾಗೂ ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಸೇರ್ಪಡೆ ಮಾಡುವಂತೆ ಒತ್ತಾಯಿಸಿ, ಇದೇ 23 ರಿಂದ ಕೂಡಲ ಸಂಗಮದ ಲಿಂಗಾ ಯತ ಪಂಚಮಸಾಲಿ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಕೂಡಲ ಸಂಗಮದಿಂದ ಬೆಂಗಳೂರು ವಿಧಾನ ಸೌಧ ದವರೆಗೆ ಪಂಚ ಲಕ್ಷ್ಮ ಹೆಜ್ಜೆಗಳೊಂದಿಗೆ ಬೃಹತ್ ಪಾದಯಾತ್ರೆ ಮಾಡಲು ತೀರ್ಮಾನಿಸಲಾಗಿದೆ ಎಂದು ಸಮಾಜದ ಮುಖಂಡ ಗಂಗಾಧರ ಕಾರಿಗನೂರು ತಿಳಿಸಿದ್ದಾರೆ.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಮೀಸಲಾತಿಗಾಗಿ ಈ ಹಿಂದೆ ಶ್ರೀಗಳು ಉಪವಾಸ ಸತ್ಯಾಗ್ರಹ ನಡೆಸಿದ್ದಾಗ ಮುಖ್ಯಮಂತ್ರಿಗಳು ಮೂರು ದಿನದೊಳಗೆ ಒಳ್ಳೆಯ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದರು. ಆದರೆ ಇಲ್ಲಿಯವರೆಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಕಾರಣ ಪಾದಯಾತ್ರೆ ನಡೆಸಲು ಶ್ರೀಗಳು ಉದ್ದೇಶಿಸಿದ್ದಾರೆ ಎಂದರು.
ಪಾದಯಾತ್ರೆ ಯಶಸ್ವಿಗೊಳಿಸಲು ಜಿಲ್ಲಾ ಸಮಾಜ ಬಾಂಧವರೊಂದಿಗೆ ಚರ್ಚಿಸಲು ನಾಡಿದ್ದು ದಿನಾಂಕ 8 ರಂದು ಬೆಳಿಗ್ಗೆ 10.30ಕ್ಕೆ ನಗರದ ಚೇತನಾ ಹೋಟೆಲ್ನಲ್ಲಿ ಜಿಲ್ಲಾ ಪಂಚಮಸಾಲಿ ಸಮಾಜದ ಪೂರ್ವಭಾವಿ ಸಭೆ ಕರೆಯಲಾಗಿದೆ. ಸಭೆಯಲ್ಲಿ ಸಮಾಜದ ಮುಖಂಡ ವಿಜಯಾನಂದ ಕಾಶೆಂಪೂರ್ ಹಾಲಿ ಮಾಜಿ ಶಾಸಕರು, ಜನಪ್ರತಿನಿಧಿಗಳು ಆಗಮಿಸಲಿದ್ದಾರೆ ಎಂದು ಪ್ರಭು ಕಲಬುರ್ಗಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಂಜುನಾಥ್ ಅಗಡಿ, ಅಶೋಕ್ ಗೋಪನಾಳು, ಜಯಪ್ರಕಾಶ್ ಸತ್ತೂರು, ನಾಗರಾಜ ಕತ್ತಲಗೆರೆ ಹಾಗೂ ಇತರರು ಉಪಸ್ಥಿತರಿದ್ದರು.