ಸಹಕಾರ ಚುನಾವಣಾ ಪ್ರಾಧಿಕಾರದ ಆದೇಶ: ಇಂದೂಧರ್
ಮಲೇಬೆನ್ನೂರು, ನ.28- ಇಲ್ಲಿನ ಶ್ರೀ ನಂದಿ ಸೌಹಾರ್ದ ಸಹಕಾರಿಯ ಆಡಳಿತ ಮಂಡಳಿ ಚುನಾವಣೆ ಯಲ್ಲಿ ಸಹಕಾರಿಯ ಎಲ್ಲಾ ಸದಸ್ಯರನ್ನೊಳಗೊಂಡಂತೆ ಮತದಾರರ ಪಟ್ಟಿಯನ್ನು ಅಂತಿಮಗೊಳಿಸುವಂತೆ ರಾಜ್ಯ ಸಹಕಾರ ಚುನಾವಣಾ ಪ್ರಾಧಿಕಾರದ ಆಯುಕ್ತ ಡಾ.ಎನ್.ಎಸ್. ಚನ್ನಪ್ಪಗೌಡ ಚುನಾವಣಾಧಿಕಾರಿಗಳಿಗೆ ಆದೇಶ ನೀಡಿದ್ದಾರೆ ಎಂದು ಸಹಕಾರಿ ನಿರ್ದೇಶಕ ಜಿಗಳಿಯ ಇಂದೂಧರ್ ಎನ್. ರುದ್ರೇಗೌಡ ತಿಳಿಸಿದ್ದಾರೆ.
ಪಟ್ಟಣದ ಶ್ರೀ ನಂದಿ ಸೌಹಾರ್ದ ಸಹಕಾರಿ ಕಚೇರಿ ಯಲ್ಲಿ ಇಂದು ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಈ ಹಿಂದೆ ಇದ್ದ ಶ್ರೀ ನಂದಿ ಪತ್ತಿನ ಸಹ ಕಾರ ಸಂಘವು ಇದೇ ಮಾರ್ಚ್ 2 ರಿಂದ ಶ್ರೀ ನಂದಿ ಸೌಹಾರ್ದ ಸಹಕಾರಿ ನಿಯಮಿತ ಎಂದು ಪರಿವರ್ತನೆಯಾಗಿರುವ ಕಾರಣ ಹೊಸ ನೋಂದಣಿಯಾಗಿರುತ್ತದೆ ಎಂದು ಹೇಳಿದರು.
ಹೀಗೆ ನೋಂದಣಿ ಆದ ಸಹಕಾರಿಗೆ ಕರ್ನಾಟಕ ಸೌಹಾರ್ದ ಸಹಕಾರಿ ಕಾಯ್ದೆ ಅನ್ವಯವಾಗುವುದಿಲ್ಲವಾದ ಕಾರಣ ಸಹಕಾರಿಯ ಎಲ್ಲಾ 2,772 ಷೇರುದಾರರನ್ನು ಮತದಾರರೆಂದು ಪರಿಗಣಿಸುವಂತೆ ನಾನು ಸಲ್ಲಿಸಿದ ಮನವಿ ಪುರಸ್ಕರಿಸಿದ್ದು, ಪ್ರಾಧಿಕಾರವನ್ನು ಅಭಿನಂದಿಸುತ್ತೇನೆ ಎಂದು ಇಂದೂಧರ್ ಹೇಳಿದರು.
ಇದೇ ತಿಂಗಳ 6ನೇ ತಾರೀಖಿನಂದು ಈ ಸಂಬಂಧ ಚುನಾವಣಾಧಿಕಾರಿಗಳಿಗೆ ಪತ್ರ ಬರೆದು ತಾತ್ಕಾಲಿಕ ಪಟ್ಟಿ ಯಲ್ಲಿ ನನ್ನನ್ನೂ ಸೇರಿದಂತೆ 1,564 ಷೇರುದಾರರ ಹೆಸ ರನ್ನು ವಿವಿಧ ಕಾರಣ ನೀಡಿ ತೆಗೆದು ಹಾಕಿ, ಕೇವಲ 676 ಷೇರುದಾರರನ್ನು ಮಾತ್ರ ಮತದಾರರೆಂದು ಘೋಷಿಸಲಾಗಿದೆ.
ಸಹಕಾರಿ ಹೊಸದಾಗಿ ನೋಂದಣಿಯಾಗಿರುವು ದರಿಂದ ಮೊದಲ ಚುನಾವಣೆಗೆ ಎಲ್ಲ ಷೇರುದಾರರಾಗಿ ಮತದಾನದ ಹಕ್ಕನ್ನು ನೀಡಿ ಎಂದು ಮನವಿ ಮಾಡಿ, ತಾತ್ಕಾಲಿಕ ಮತದಾರರ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲಾಗಿತ್ತು ಎಂದು ತಿಳಿಸಿದರು.