ಸಮಸ್ಯೆಗೆ ಸ್ಪಂದಿಸದ ಅಭ್ಯರ್ಥಿಗಳಿಂದ ಮತ ಯಾಚನೆ ಎಷ್ಟು ಸರಿ ?

ಸಮಸ್ಯೆಗೆ ಸ್ಪಂದಿಸದ ಅಭ್ಯರ್ಥಿಗಳಿಂದ ಮತ ಯಾಚನೆ ಎಷ್ಟು ಸರಿ ? - Janathavaniದಾವಣಗೆರೆ, ಅ.8- ಪದವೀಧರರ ಧ್ವನಿಯಾಗ ಬೇಕಿದ್ದ ಶಿಕ್ಷಕರಿಗೆ, ಉಪನ್ಯಾಸಕರಿಗೆ, ಇತರೆ ನೌಕ ರರಿಗೆ ಸೌಲಭ್ಯ ಒದಗಿಸಿಕೊಡಬೇಕಾದ ಪದವೀಧರ ಕ್ಷೇತ್ರದ ಅಭ್ಯರ್ಥಿಗಳು ಸಮಸ್ಯೆಗೆ ಸ್ಪಂದಿಸದೇ ಕೇವಲ ಮತ ಯಾಚನೆಗೆ ಮುಂದಾಗಿರುವುದು ನೈತಿಕವಾಗಿ ಎಷ್ಟು ಸರಿ ಎಂದು ಸಾಮಾಜಿಕ ಕಾರ್ಯಕರ್ತ ಎನ್. ರಾಜಶೇಖರ್ ಪ್ರಶ್ನಿಸಿದ್ದಾರೆ.

ಶಿಕ್ಷಣ ಸಂಸ್ಥೆಗಳಿಗೆ ಮೊದಲ ಕಂತಿನ ಶುಲ್ಕ ಭರಿಸಿಕೊಳ್ಳಿ ಎಂದು ನಿರ್ದೇಶನ ನೀಡುವ ಸರ್ಕಾರ, ಅದೇ ಶಿಕ್ಷಣ ಸಂಸ್ಥೆಗಳಲ್ಲಿ ದುಡಿಯುವ ಪ್ರತಿಯೊಬ್ಬ ನೌಕರನಿಗೂ ಸಂಬಳ ನೀಡಲು ಏಕೆ ನಿರ್ದೇಶನ ನೀಡುವುದಿಲ್ಲ ಎಂದು ಯಾವ ಅಭ್ಯರ್ಥಿಯೂ ಗಟ್ಟಿ ಧ್ವನಿಯಲ್ಲಿ ಕೇಳುತ್ತಿಲ್ಲ.

ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣಾ ಪ್ರಚಾರ ರಂಗೇರುತ್ತಿದ್ದು ಅಭ್ಯರ್ಥಿಗಳು ಮನೆ ಮನೆಗೆ, ಮಠ, ಮಂದಿರಗಳಿಗೆ, ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಮತ ಯಾಚಿಸುತ್ತಿದ್ದಾರೆ. ಆದರೆ ಕೊರೊನಾದಿಂದ ಜನರು ಕಂಗಾಲಾಗಿದ್ದಾರೆ. ಅದರಲ್ಲೂ ವಿಶೇಷವಾಗಿ ಖಾಸಗಿ ಶಾಲಾ ಶಿಕ್ಷಕರು, ಅತಿಥಿ ಉಪನ್ಯಾಸಕರು ಸಂಬಳವಿಲ್ಲದೇ ಸಂಕಷ್ಟದಲ್ಲಿದ್ದಾರೆ. ನಿತ್ಯ ದಿನಗೂಲಿ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ.  ಕಿಂಚಿತ್ತೂ ಕೂಡ ಇವರತ್ತ ಗಮನ ಹರಿಸಿಲ್ಲ. ಶಿಕ್ಷಕರ, ಉಪನ್ಯಾಸಕರ ಸಂಘಟನೆಯ ಜಿಲ್ಲಾಧ್ಯಕ್ಷರಿಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ ಎಂದು ರಾಜಶೇಖರ್ ಕಳಕಳಿ ವ್ಯಕ್ತಪಡಿಸಿದ್ದಾರೆ.

error: Content is protected !!