ದಾವಣಗೆರೆಯಲ್ಲಿ ವ್ಯವಹಾರ ನಿರಾಳ

ದಾವಣಗೆರೆ, ಮೇ 19- ಲಾಕ್‌ಡೌನ್ ಸಡಿಲಿಕೆ ಮಾಡಿದ ಪರಿಣಾಮ ನಗರದ ಆರ್ಥಿಕತೆ ಮಂಗಳವಾರ ಮತ್ತಷ್ಟು ಚುರುಕು ಪಡೆದಿರುವಂತೆ ಕಂಡು ಬಂತು.

ಬೆಳಿಗ್ಗೆಯಿಂದಲೇ ಮಾರುಕಟ್ಟೆಯತ್ತ ಜನ ಬರಲಾರಂಭಿಸಿದ್ದರು. ಬಹುತೇಕ ಅಂಗಡಿಗಳು ಬಾಗಿಲು ತೆರೆದು ಕಾರ್ಯನಿರ್ವಹಿಸಿದವು. ಕೆಲ ಚಿನ್ನ ಬೆಳ್ಳಿ ಅಂಗಡಿಗಳು ಮಧ್ಯಾಹ್ನದ ವರೆಗೆ ಮಾತ್ರ ತೆರೆಯಲ್ಪಟ್ಟಿದ್ದವು. 

ಮಂಡಿಪೇಟೆ, ಚಾಮರಾಜ ನಗರ ವೃತ್ತದ  ಸುತ್ತ ಮುತ್ತಮುತ್ತಲಿನ ಪ್ರದೇಶ, ಎಂ.ಜಿ. ರಸ್ತೆ, ಗಡಿಯಾರ ಕಂಬ, ಬಂಬೂ ಬಜಾರ್, ಅಶೋಕ ರಸ್ತೆ, ಹದಡಿ ರಸ್ತೆ, ಗಾಂಧಿ ರಸ್ತೆಗಳಲ್ಲಿ ಜನ ಸಂಖ್ಯೆ ಮಾಮೂಲಿಯಂತಿತ್ತು. ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಆತಂಕಗೊಂಡ ಗ್ರಾಮೀಣ ಪ್ರದೇಶದ ಜನತೆ ನಗರಕ್ಕೆ ಬರಲು ಹಿಂದೇಟು ಹಾಕುತ್ತಿದ್ದರು.

ಆದರೆ ಹದವಾದ ಮಳೆಯಾಗು ತ್ತಿರುವುದರಿಂದ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳು ಆರಂಭವಾಗಲಿವೆ. ಈ ನಿಟ್ಟಿನಲ್ಲಿ ಅಗತ್ಯವಸ್ತುಗಳನ್ನು ಕೊಳ್ಳಲು ಜನತೆ ಇದೀಗ ನಗರಕ್ಕೆ ಬರಲಾರಂಭಿಸಿದ್ದಾರೆ.

ಆಟೋಗಳ ಸಂಖ್ಯೆಯೂ ವಿರಳವಾಗಿತ್ತು. ಮಾರುಕಟ್ಟೆ ಪ್ರದೇಶಗಳ ಬಳಿ ಮಾತ್ರ ಆಟೋಗಳ ಸೇವೆ ಬಳಕೆ ಮಾಡಿಕೊಂಡರು. ಉಳಿದಂತೆ ಸಂಜೆ ವೇಳೆಗೆ ಅಪ್ಪೇ ಆಟೋಗಳು ನಗರ ಹೊರ ಪ್ರದೇಶಗಳಿಗೆ ಪ್ರಯಾಣಿಕರನ್ನು ತುಂಬಿಕೊಂಡು ಹೋಗುತ್ತಿದ್ದುದು ಕಂಡು ಬಂದಿತು.

error: Content is protected !!