ಕೊಂಡಜ್ಜಿಯಲ್ಲಿ ಕೋಳಿಗಳ ಅಸಹಜ ಸಾವು ಸಂಭವಿಸಿಲ್ಲ : ಪಶುಪಾಲನಾ ಇಲಾಖೆ ಸ್ಪಷ್ಟನೆ

ಹರಿಹರ, ಮಾ.19- ತಾಲ್ಲೂಕಿನ ಕೊಂಡಜ್ಜಿ ಗ್ರಾಮದಲ್ಲಿ ಕೋಳಿಗಳ ಅಸಹಜ ಸಾವು ವರದಿಯಾ ಗಿರುವುದಿಲ್ಲ. ಹಾಗೂ ಹಕ್ಕಿ ಶೀತ ಜ್ವರದ ಲಕ್ಷಣಗಳು ಕಂಡುಬಂದಿರುವುದಿಲ್ಲ ಎಂದು ಪಶುಪಾಲನಾ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

ಕೊಂಡಜ್ಜಿ ಗ್ರಾಮದಲ್ಲಿ ಕೋಳಿಗಳ ಸಾವಿನ ಕುರಿತು ಕೆಲ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗಿದ್ದು, ಈ ಹಿನ್ನೆಲೆಯಲ್ಲಿ ತಜ್ಞರು, ಗ್ರಾ.ಪಂ. ಪಿಡಿಒ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಮಾಧ್ಯಮದ ಪ್ರತಿನಿಧಿಗಳೊಂದಿಗೆ ಕೊಂಡಜ್ಜಿ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳಲ್ಲಿರುವ ಕೋಳಿ ಫಾರಂಗಳ ತಪಾಸಣೆ ಮಾಡಲಾಯಿತು.

ಅರಣ್ಯದಲ್ಲಿ ಕೆಲವು ಸತ್ತ ಕೋಳಿಗಳನ್ನು ಚೀಲಗಳಲ್ಲಿ ತುಂಬಿ ಎಸೆಯಲಾಗಿರುವುದನ್ನು ಕೂಡಾ ಪರಿಶೀಲಿಸಲಾಯಿತು. ಅಂತಹ ತೂಕದ ಕೋಳಿಗಳು ಕೊಂಡಜ್ಜಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಸದ್ಯಕ್ಕೆ ಇರುವುದಿಲ್ಲ ಎಂಬುದು ತಿಳಿದುಬಂದಿದೆ. ಸತ್ತ ಕೋಳಿಗಳನ್ನು ಗ್ರಾ.ಪಂ. ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಯವರೊಂದಿಗೆ ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಯಿತು.

ಅವಶ್ಯಕ ಸೀರಂ, ಟ್ರೇಕಿಯಲ್/ಕ್ಲೊಯಕಲ್ ಸ್ವಾಬ್ ಮತ್ತು ಪರಿಸರ ಮಾದರಿಗಳನ್ನು ನಿಯಮಿತವಾಗಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಸಲ್ಲಿಸಲು ಕ್ರಮವಹಿಸ ಲಾಗಿದೆ. ಫಾರ್ಮ್ ಮಾಲೀಕರುಗಳು ಹಾಗೂ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಕೋಳಿಗಳಲ್ಲಿ ಅಸಹಜ ಸಾವು ಕಂಡುಬಂದಲ್ಲಿ ತಕ್ಷಣ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಲು ತಿಳಿಸಲಾಗಿದೆ.

error: Content is protected !!