ದಾವಣಗೆರೆ, ಮಾ.12- ಸರ್ಕಾರಿ ಕೋಟಾದಲ್ಲಿ ಸ್ಥಾನ ಗಳಿಸಿ, 2021-22 ನೇ ಸಾಲಿನ ಪ್ರಥಮ ವರ್ಷದ ವೈದ್ಯಕೀಯ ವಿದ್ಯಾಭ್ಯಾಸ ಮಾಡುತ್ತಿರುವ ರಾಜ್ಯ ಮಟ್ಟದ ಸಾಧು ಲಿಂಗಾ ಯತ ಸಮಾಜದ ಆರ್ಥಿಕ ಸಂಕಷ್ಟದಲ್ಲಿರುವ ವಿದ್ಯಾರ್ಥಿ ಗಳಿಗೆ 5 ವರ್ಷದ ಅಧ್ಯಯನ ಅವಧಿಗೆ ಆರ್ಥಿಕ ನೆರವು ನೀಡಲು ಸಾದರ ನೌಕರರ ಬಳಗ ಮುಂದಾಗಿದೆ.
ಆಸಕ್ತರು ಇದೇ ದಿನಾಂಕ 26 ರೊಳಗೆ ಅಗತ್ಯವಿರುವ ದಾಖಲೆಗಳೊಂದಿಗೆ ತಮ್ಮ ಊರಿನ ಇಬ್ಬರು ಪ್ರಮುಖ ವ್ಯಕ್ತಿಗಳ ಮೊಬೈಲ್ ನಂಬರ್ ಮತ್ತು ವಿಳಾಸವನ್ನು ನಮೂದು ಮಾಡಿ, ಕೆ. ನಾಗಪ್ಪ, ಅಧ್ಯಕ್ಷರು ಸಾದರ ನೌಕರರ ಬಳಗ, ಸಾದರ ಪತ್ತಿನ ಸಹಕಾರ ಬ್ಯಾಂಕ್, ಡೋರ್. ನಂ. 1645/145, ವಿದ್ಯಾನಗರ ಮುಖ್ಯ ರಸ್ತೆ, ಪೋಸ್ಟ್ ಆಫೀಸ್ ಎದುರು, ದಾವಣಗೆರೆ- 5 ಅರ್ಜಿ ಸಲ್ಲಿಸುವುದು.
ವಿವರಕ್ಕೆ ಮೊ: 98443 69744, 9448439662 ಸಂಪರ್ಕಿಸುವುದು.