ರಾಣೇಬೆನ್ನೂರು, ಫೆ.22- ಉತ್ತರ ಭಾರತದ ಹರಿದ್ವಾರ, ಋಶಿಕೇಶ, ಕಾಶಿಯಲ್ಲಿ ನಡೆಸುವ ಗಂಗಾರತಿಯಂತೆ ಪುಣ್ಯಕೋಟಿ ಮಠದಿಂದ ತುಂಗಭದ್ರಾ ತೀರದಲ್ಲಿ ತುಂಗಾರತಿ ಸಮಾರಂಭವನ್ನು ಇದೇ ದಿನಾಂಕ 28 ರ ರವಿವಾರದಂದು ನಡೆಸಲಾಗುತ್ತಿದೆ ಎಂದು ಪುಣ್ಯಕೋಟಿ ಮಠದ ಶ್ರೀ ಬಾಲಯೋಗಿ ಜಗದೀಶ್ವರ ಸ್ವಾಮೀಜಿ ಇಂದು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ರಂಭಾಪುರಿ ಜಗದ್ಗುರು ಲಿಂ. ವೀರಗಂಗಾಧರ ಸ್ವಾಮಿಗಳ ಪುಣ್ಯಾರಾಧನೆ ನಿಮಿತ್ತ ನಡೆಸಲಾಗುವ ಸಮಾರಂಭದ ಸಾನ್ನಿಧ್ಯವನ್ನು ಶ್ರೀಶೈಲ ಜಗದ್ಗುರು ಶ್ರೀ ವೀರಸೋಮೇಶ್ವರ ಸ್ವಾಮಿಗಳು ವಹಿಸುವರು. ರಾಜನಹಳ್ಳಿ ವಾಲ್ಮೀಕಿ ಪೀಠದ ಜಗದ್ಗುರುಗಳು, ಆದಿಚುಂಚನಗಿರಿ ಸಂಸ್ಥಾನದ ಜಗದ್ಗುರುಗಳು ಪಾಲ್ಗೊಳ್ಳುವರು.
ರಾಮನಗರ ಜಿಲ್ಲೆ ಕವಣಾಪುರದ ಶ್ರೀ ಬಸವೇಶ್ವರ ಸ್ವಾಮೀಜಿ ಇದೇ ದಿನಾಂಕ 27 ರಂದು ಆಗಮಿಸಿ, ಎರಡು ದಿನ ಇಲ್ಲಿಯೇ ವಾಸ್ತವ್ಯ ಮಾಡಿ ಭಕ್ತರನ್ನು ಆಶೀರ್ವದಿಸಲಿದ್ದಾರೆ. ಶಾಸಕ ಅರುಣ್‌ಕುಮಾರ್ ಪೂಜಾರ್, ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಬಿ. ಕೋಳಿವಾಡ ಭಾಗವಹಿಸುವರು.