ಹೊನ್ನಾಳಿ, ಏ.14 – ಶಾಸಕ ಎಂ.ಪಿ.ರೇಣುಕಾಚಾರ್ಯ ಹಾಗೂ ಬಿಜೆಪಿ ಪಕ್ಷದ ಮುಖಂಡರ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿರುವುದು ಮಾಜಿ ಶಾಸಕ ಡಿ.ಜಿ.ಶಾಂತನಗೌಡ ಅವರಿಗೆ ಶೋಭೆಯಲ್ಲ ಎಂದು ತಾಲ್ಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ.ಸುರೇಶ್ ಹೇಳಿದರು.
ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ನಡೆದಿರುವ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆದಿದ್ದರೆ ಆಧಾರಗಳನ್ನು ಇಟ್ಟುಕೊಂಡು ಸಾಬೀತುಪಡಿಸಲಿ.
ತಾಲ್ಲೂಕಿನಲ್ಲಿ ನಡೆದಿರುವ ಕಾಮಗಾರಿಗಳ ಬಿಲ್‍ಗ ಳಿಗೆ ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ಸಹಿ ಮಾಡಿ ಸುತ್ತಾರೆ ಎಂದು ಮಾಜಿ ಶಾಸಕರು ಆರೋಪಿಸಿದ್ದು, ಯಾವ ಅಧಿಕಾರಿಯಿಂದ ಸಹಿ ಮಾಡಿಸಿಕೊಳ್ಳಲಾಗಿದೆ ಎಂದು ನಿರ್ದಿಷ್ಟವಾಗಿ ಹೇಳಿ ಸಾಬೀತು ಪಡಿಸಿದರೆ ತಾವು ಬಿಜೆಪಿ ತಾಲ್ಲೂಕು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಜೆ.ಕೆ. ಸುರೇಶ್ ಹೇಳಿದರು.
ಹಿರಿಯರಾದ ಮಾಜಿ ಶಾಸಕ ಡಿ.ಜಿ.ಶಾಂತನಗೌಡ ಚುನಾವಣೆಗಳು ಸಮೀಪಿಸುತ್ತಿರುವ ಸಂದರ್ಭದಲ್ಲಿ ಅನ ಗತ್ಯ ಆರೋಪಗಳನ್ನು ಮಾಡಿ ತಾಲ್ಲೂಕಿನ ಜನತೆಯನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಅವಳಿ ತಾಲ್ಲೂಕಿನಲ್ಲಿ ಪ್ರಸ್ತುತ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ಅಧಿಕಾರ ಅವಧಿಯಲ್ಲಿ ಸಾವಿರಾರು ಕೋಟಿ ರೂ. ಅನುದಾನದಲ್ಲಿ ಸಾಕಷ್ಟು ಉತ್ತಮ ಅಭಿವೃದ್ದಿ ಕೆಲಸಗಳು ನಡೆದಿರುವುದು ಜನತೆಯ ಕಣ್ಣಮುಂದೆ ಇವೆ. ನಿಮ್ಮ ಅವಧಿಯಲ್ಲಿ ನಡೆದಿರುವ ಅಭಿವೃದ್ದಿ ಕೆಲಸಗಳನ್ನು ಜನತೆಗೆ ವಿವರಿಸಿ.
ರೇಣುಕಾಚಾರ್ಯ ಅವರು ರಾಜ್ಯದಲ್ಲಿ ಕೋವಿಡ್ ಇದ್ದರೂ ಸಹ ಸರ್ಕಾರದಿಂದ ಕೋಟ್ಯಾಂತರ ರೂ.ಅನುದಾನ ತಂದು, ಗುರುತರವಾದ ಅಭಿವೃದ್ಧಿಗಳನ್ನು ಮಾಡುತ್ತಿರುವುದು ಮಾಜಿ ಶಾಸಕರಿಗೆ ಹಾಗೂ ಕಾಂಗ್ರೆಸ್ ಮುಖಂಡರಿಗೆ ಸಹಿಸಲಾಗದೆ ಹತಾಶೆ ಮನೋಭಾವ ದಿಂದ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದರು.
ಸುದ್ದಿ ಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಸುರೇಂದ್ರನಾಯ್ಕ್, ತಾ.ಪಂ. ಉಪಾಧ್ಯಕ್ಷ ಕುಳಗಟ್ಟೆ ರಂಗನಾಥ್, ಎಪಿಎಂಸಿ ನಿರ್ದೇಶಕ ಜಿ.ವಿ.ರಾಜು, ತಾಂಡಾ ಅಭಿವೃದ್ಧಿ ನಿಗಮದ ನಿರ್ದೇಶಕ ಮಾರುತಿನಾಯ್ಕ್, ಪುರಸಭೆ ಸದಸ್ಯ ಬಾಬೂ ಹೋಬಳದಾರ್, ರಂಗಪ್ಪ, ಜಿಲ್ಲಾ ಬಿಜೆಪಿ ಮುಖಂಡರಾದ ಅರಕೆರೆ ನಾಗರಾಜ್, ಕುಬೇಂದ್ರಪ್ಪ, ದಿಡಗೂರು ಪಾಲಾಕ್ಷಪ್ಪ ಹಾಗೂ ಇತರರು ಇದ್ದರು.