ದಾವಣಗೆರೆ, ಏ.9- ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ ವತಿಯಿಂದ ಜಿಲ್ಲಾ ಪಂಚಾಯತ್ ದಾವಣಗೆರೆ ಸಂಯುಕ್ತಾ ಶ್ರಯದಲ್ಲಿ ಜಿಲ್ಲೆಯ ಬಡತನ ರೇಖೆಗಿಂತ ಕೆಳಗಿರುವ ಗ್ರಾಮೀಣ ಮಟ್ಟದ ಮಹಿಳೆಯರಿಗಾಗಿ 30 ದಿನಗಳ ಹೊಲಿಗೆ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತ 18 ರಿಂದ 45 ವಯೋಮಿತಿಯ ಜಿಲ್ಲೆಯ ಗ್ರಾಮೀಣ ಮಟ್ಟದ ಬಿಪಿಎಲ್ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಏಪ್ರಿಲ್ 17 ರಂದು ನೇರವಾಗಿ ತರಬೇತಿ ಸಂಸ್ಥೆಗೆ ಭೇಟಿ ನೀಡಿ ಅಥವಾ ಮೊಬೈಲ್: 9481977076, 9964111314ಗೆ ಹೆಸರು ನೋಂದಾಯಿಸುವುದು. ಹೆಚ್ಚಿನ ಮಾಹಿತಿಗೆ ಮೇಲ್ಕಂಡ ಸಂಖ್ಯೆಗೆ ಸಂಪರ್ಕಿಸುವುದು.
April 3, 2025