ರಾಣೇಬೆನ್ನೂರು, ಫೆ.5- ಜಿಲ್ಲೆಯಲ್ಲಿ ಅತಿ ದೊಡ್ಡ ತಾಲ್ಲೂಕು ಕೇಂದ್ರವಾದ ವಾಣಿಜ್ಯ ನಗರಿ ರಾಣೇಬೆನ್ನೂರಿನಲ್ಲಿ ಶೀಘ್ರದಲ್ಲಿಯೇ ನೂತನ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗುವುದು ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಿರ್ದೇಶಕ ಸಂತೋಷಕುಮಾರ ಪಾಟೀಲ ತಿಳಿಸಿದ್ದಾರೆ.
ನಗರದ ಬಸ್‍ನಿಲ್ದಾಣದಲ್ಲಿ ನಿತ್ಯ 900 ಬಸ್‍ಗಳು ಬಂದು ಹೋಗಲಿದ್ದು, 45 ರಿಂದ 50 ಸಾವಿರ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಹೀಗಾಗಿ ಬಸ್‍ನಿಲ್ದಾಣ ಕಿರಿದಾಗಿದ್ದು, ಪ್ರಯಾ ಣಿಕರಿಗೆ ತೊಂದರೆಯಾಗುವ ಜತೆಗೆ ಬಸ್‍ಗಳ ಸಂಚಾರ ದಟ್ಟಣೆ ಹೆಚ್ಚಾಗಿ ಟ್ರಾಫಿಕ್ ಸಮಸ್ಯೆ ಎದುರಿಸಬೇಕಾಗಿದೆ. ಈಗಾಗಲೇ ಶಾಸಕರೊಂ ದಿಗೆ ಮಾತುಕತೆ ನಡೆಸಿದ್ದು, ನಗರದ ಹೊರ ವಲಯದಲ್ಲಿರುವ ದನದ ಮಾರುಕಟ್ಟೆಯಲ್ಲಿ 5 ಎಕರೆ ಜಮೀನು ನೀಡಬೇಕು ಎಂದು ಎಪಿಎಂಸಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಬಸ್ ನಿಲ್ದಾಣಕ್ಕೆ ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಮೆಡ್ಲೇರಿ ರಸ್ತೆಯಲ್ಲಿ ಸಾರಿಗೆ ಇಲಾಖೆಗೆ ಸೇರಿದ 15 ಎಕರೆ ಜಮೀನು ಇದೆ. ಹುಬ್ಬಳ್ಳಿ ಬಿಟ್ಟರೆ ಬೇರೆಡೆ ಚಾಲಕ ರಿಗೆ ಹಾಗೂ ನಿರ್ವಾಹಕರಿಗೆ ತರಬೇತಿ ಹಾಗೂ ನೇಮಕಾತಿ ಕೇಂದ್ರವಿಲ್ಲ. ಹಾಗಾಗಿ ರಾಣೇಬೆನ್ನೂರಿ ನಲ್ಲಿ ಕೇಂದ್ರವನ್ನು ನಿರ್ಮಿಸುವ ಉದ್ದೇಶವಿದೆ ಎಂದರು.
ಕೋವಿಡ್ ಸಮಯದಲ್ಲಿ ಬಂದ್ ಆಗಿದ್ದ ಶಾಲಾ- ಕಾಲೇಜುಗಳು ಇತ್ತೀಚೆಗೆ ಆರಂಭ ವಾಗಿವೆ. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ಬಸ್‍ಗಳ ಸಂಚಾರ ಆರಂಭಿಸ ಲಾಗಿದೆ. ನಮ್ಮ ನಿಗಮದ ವ್ಯಾಪ್ತಿಯಲ್ಲಿ ಯಾವುದೇ ಜಿಲ್ಲೆಯ ವಿದ್ಯಾರ್ಥಿಗಳಿಗೆ ಬಸ್‍ಗಳ ಸಮಸ್ಯೆಯಾ ದರೆ ಶಾಲೆಯ ಮುಖ್ಯ ಗುರುಗಳು ಅಥವಾ ಬಿಇಒ ಗಳ ಮುಖಾಂತರ ನನಗೆ ಅಥವಾ ಡಿಪೋ ಮುಖ್ಯಸ್ಥರ ಗಮನಕ್ಕೆ ತನ್ನಿ ಎಂದು ತಿಳಿಸಿದರು.
ಗ್ರಾಮೀಣ ಭಾಗದ ಅನೇಕ ಕಡೆಗಳಲ್ಲಿ ಬಸ್ ನಿಲ್ದಾಣವಿಲ್ಲ. ಹೀಗಾಗಿ ಬಸ್ ನಿಲ್ದಾಣ ವಿಲ್ಲದ ಭಾಗದಲ್ಲಿ ಸರ್ಕಾರದ ಜಾಗವಿದ್ದರೆ ಶಾಸಕರ ಹಾಗೂ ಸಂಸದರ ಅನುದಾನದಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡಲು ಗಮನಹ ರಿಸಲಾಗುವುದು. ಮುಂದಿನ ದಿನಗಳಲ್ಲಿ ನಗರದಲ್ಲಿ ಎಲೆಕ್ಟ್ರಿಕಲ್ ಬಸ್‍ಗಳ ಸಂಚಾರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.