ದಾವಣಗೆರೆ,ಫೆ.4- ಗೃಹ ಮಂತ್ರಾಲಯ, ಕರ್ನಾಟಕ ಸರ್ಕಾರವು ರಾಜ್ಯದ ಸಾರ್ವಜನಿಕರಿಗೆ ಅನುಕೂಲವಾಗಲು ಹಾಗೂ ಸುಲಭವಾಗಿ ಮಾಹಿತಿ ಮತ್ತು ಸೇವಾ ಸೌಲಭ್ಯಗಳನ್ನು ನೀಡಲು ಪೊಲೀಸ್ ಇಲಾಖೆಯು ರಾಜ್ಯದ ಎಲ್ಲಾ ಜಿಲ್ಲೆಗಳ ವೆಬ್ಸೈಟ್ಗಳನ್ನು ಏಕ ರೂಪ ವ್ಯವಸ್ಥೆಯಡಿಯಲ್ಲಿ ಜಾರಿಗೆ ತಂದಿದೆ.
ಸಾರ್ವಜನಿಕರು ಯಾವುದೇ ಜಿಲ್ಲೆಯ ಪೊಲೀಸ್ ವೆಬ್ಸೈಟನ್ನು ವೀಕ್ಷಿಸಲು ಸುಲಭ ಮಾರ್ಗವನ್ನು ಇಲಾಖೆ ಮಾಡಿದೆ. ಉದಾ: ಸಾರ್ವಜನಿಕರು ದಾವಣಗೆರೆ ಜಿಲ್ಲಾ ಪೊಲೀಸ್ ವೆಬ್ಸೈಟನ್ನು ವೀಕ್ಷಿಸಲು:- Davangerepolice.karnataka.gov.in ಎಂದು ನಮೂದಿಸಿದರೆ ದಾವಣಗೆರೆ ಜಿಲ್ಲೆಯ ವೆಬ್ಸೈಟ್ ತೆರೆದುಕೊಳ್ಳುತ್ತದೆ.
ಜಿಲ್ಲಾ ಪೊಲೀಸ್ ವೆಬ್ ಸೈಟ್ನಲ್ಲಿ ಜಿಲ್ಲೆಗೆ ಸಂಬಂಧಿಸಿದ ಪೊಲೀಸ್ ಇಲಾಖೆಯ ಎಲ್ಲಾ ಮಾಹಿತಿಗಳು, ಆದೇಶಗಳು, ಪತ್ರಿಕಾ ಪ್ರಕಟಣೆಗಳು, ಜಿಲ್ಲಾ ಪೊಲೀಸ್ ವ್ಯವಸ್ಥೆಯ ವಿವಿಧ ಹಂತದ ಕಛೇರಿಗಳು, ಪೊಲೀಸ್ ಠಾಣೆಗಳು, ಅಧಿಕಾರಿಗಳು, ಸಿಬ್ಬಂದಿಗಳ ಬಗ್ಗೆ, ಇ-ಬೀಟ್ ವ್ಯವಸ್ಥೆ ಬಗ್ಗೆ, ಪೊಲೀಸ್ ಠಾಣಾ ವ್ಯಾಪ್ತಿಯ ಮ್ಯಾಪ್ಗಳು, ಸಕಾಲ, ಸೇವಾ ಸಿಂಧು, ಸುಬಾವು ಇನ್ನೂ ಅನೇಕ ಇಲಾಖೆಗಳಿಗೆ ಸಂಬಂಧಿಸಿದ ಮಾಹಿತಿ ಲಭ್ಯವಿರುತ್ತದೆ.
ಸುಬಾಹು ಇ-ಬೀಟ್ ವ್ಯವಸ್ಥೆ- ಪೊಲೀಸ್ ಇಲಾಖೆಯಲ್ಲಿ ನೂತನವಾಗಿ ಸುಬಾಹು ಇ-ಬೀಟ್ ವ್ಯವಸ್ಥೆಯನ್ನು ಜಾರಿಗೊಳಿಸಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದು, ವ್ಯವಸ್ಥೆ ಕುರಿತಂತೆ ವಿವರ ನೀಡಿದ್ದಾರೆ.
ಸುಬಾಹು ಇ-ಬೀಟ್ ವ್ಯವಸ್ಥೆ ಬಗ್ಗೆ ಮಾಹಿತಿ: ಎಲೆಕ್ಟ್ರಾನಿಕ್ ಇ-ಬೀಟ್ ವ್ಯವಸ್ಥೆಯಲ್ಲಿ ಪೊಲೀಸ್ ಸಿಬ್ಬಂದಿಯವರಿಗೆಂದ ಅಭಿವೃದ್ಧಿಪಡಿಸಿ, ಅಂಡ್ರಾಯ್ಡ್ ಆಪ್ನ್ನು ಸಿಬ್ಬಂದಿಯವ ಮೊಬೈಲ್ ಫೋನ್ಗಳಿಗೆ ಅಳವಡಿಸಲಾಗಿರುತ್ತದೆ. ಅಲ್ಲಿಯೇ ಈ ಆಪ್ನ ಕ್ಯೂ.ಆರ್ ಕೋಡ್ ಅಭಿವೃದ್ಧಿಪಡಿಸಿದ್ದು, ಬೀಟ್ನ ನಿಗದಿತ ಪಾಯಿಂಟ್ನ ಮನೆಗಳಲ್ಲಿ ಕ್ಯೂಆರ್ ಕೋಡನ್ನು ಅಳವಡಿಸಲಾಗುತ್ತದೆ. ಬೀಟ್ ಪಾಯಿಂಟ್ಗಳಿಗೆ ತೆರಳಿದ ಬೀಟ್ ಪೊಲೀಸ್ ಸಿಬ್ಬಂದಿಯವರು ಕ್ಯೂಆರ್ ಅಳಡಿಸಿದ ಜಾಗದಲ್ಲಿ ನಿಂತು ಕ್ಯೂಆರ್. ಕೋಡನ್ನು ಸ್ಕ್ಯಾನ್ ಮಾಡಿದಾಗ ಅಥವಾ ಕ್ಯೂಆರ್ ಕೋಡ್ ಅಳವಡಿಸಿದ ನಿರ್ದಿಷ್ಠ ಪ್ರದೇಶದಲ್ಲಿ ನಿಂತು ಆಪ್ನ ಕ್ಯೂಆರ್ ಕೋಡನ್ನು ರೀಡ್ ಮಾಡಬೇಕು. ಒಂದು ವೇಳೆ ಸಿಬ್ಬಂದಿ ಆಪ್ ಆನ್ ಮಾಡದಿದ್ದರೆ ಪೊಲೀಸ್ ಸಿಬ್ಬಂದಿಯವರು ಸದರಿ ಬೀಟ್ ಸ್ಥಳಕ್ಕೆ ಭೇಟಿ ನೀಡಿಲ್ಲವೆಂದು ತಿಳಿದುಬರುತ್ತದೆ.
ಈ ವ್ಯವಸ್ಥೆ ಜಾರಿಯಿಂದ ಜಿಲ್ಲೆಯ ಎಲ್ಲಾ ಸಾರ್ವಜನಿಕರ ಭದ್ರತೆಯ ಕಾರ್ಯ ಹೆಚ್ಚುತ್ತದೆ. ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಬೀಳಲಿದೆ. ಈ ಹಿಂದೆ ಇದ್ದ ರಾತ್ರಿಗಸ್ತಿನ ಸಿಬ್ಬಂದಿ ಹಾಗೂ ಉಸ್ತುವಾರಿ ಅಧಿಕಾರಿಗಳ ಕರ್ತವ್ಯ ಲೋಪ ಪತ್ತೆ ಹಚ್ಚುವುದು ಅಷ್ಟು ಸುಲಭವಾಗಿರಲಿಲ್ಲ. ಒಂದು ವೇಳೆ ಪತ್ತೆಯಾದರೂ ಕೆಲವು ಕಾರಣಗಳನ್ನು ನೀಡಿ ತಪ್ಪಿಸಿಕೊಳ್ಳತ್ತಿದ್ದರು. ಆದರೆ, ಇ-ಬೀಟ್ ವ್ಯವಸ್ಥೆಯಲ್ಲಿ ಇದಕ್ಕೆ ಅವಕಾಶವಿಲ್ಲ.
ಇ-ಬೀಟ್ನ ಮುಖ್ಯಾಂಶಗಳು: ಇ-ಬೀಟ್ ವ್ಯವಸ್ಥೆಯಲ್ಲಿ ಅನುಮಾನಸ್ಪದ ವ್ಯಕ್ತಿಗಳು ಕಂಡಾಗ ಫೋಟೋ ಅಥವಾ ವಿಡಿಯೋ ಮೂಲಕ ಆಪ್ನಲ್ಲಿ ತಕ್ಷಣಕ್ಕೆ ಮೇಲಾಧಿಕಾರಿಯವರಿಗೆ ಮಾಹಿತಿಯನ್ನು ಕಳುಹಿಸಬಹುದು.
ನೈಟ್ ಬೀಟ್ ಆಫೀಸರ್ ನೈಟ್ಬೀಟ್ ಪೊಲೀಸ್ ಸಿಬ್ಬಂದಿಯವರ ಚಲನ ವಲನಗಳನ್ನು ಆಪ್ ಮುಖಾಂತರ ಗಮನಿಸಬಹುದು.
ಬೀಟ್ ಪೊಲೀಸ್ನವರು ಕ್ಯೂಆರ್ಕೋಡ್ ಸ್ಕ್ಯಾನ್ ಮಾಡಿದಾಗ ಸಿಬ್ಬಂದಿಯವರ ಕರ್ತವ್ಯ ನಿರ್ವಹಿಸಿದ ಬಗ್ಗೆ ನೈಟ್ಬೀಟ್ ಆಫೀಸರ್ಗೆ ಮೆಸೇಜ್ ಹೋಗುತ್ತದೆ.
ಬೀಟ್ನಲ್ಲಿ ಬರುವ ಲಾಕಡ್ ಹೌಸ್ (ಬೀಗ ಹಾಕಿದ ಮನೆ) ಗಳನ್ನು ಈ ಆಪ್ ಮುಖಾಂತರ ಗಮನಿಸಬಹುದು.
ಬೀಟ್ ಸಿಬ್ಬಂದಿಯವರು ಬೀಟ್ ಸ್ಥಳಕ್ಕೆ ಭೇಟಿ ನೀಡಿದಾಗ ಸ್ಥಳದಲ್ಲಿ ವಾಸವಿದ್ದ ಸಾರ್ವಜನಿಕರಿಗೆ ಮೊಬೈಲ್ ಮುಖಾಂತರ ಭೇಟಿ ನೀಡಿದ ಬಗ್ಗೆ ಮಾಹಿತಿಯು ಮೆಸೇಜ್ ಮುಖಾಂತರ ಮಾಹಿತಿ ಹೋಗುತ್ತದೆ.
ಬೀಟ್ ಸಿಬ್ಬಂದಿಯವರು ಬೀಟ್ ಪಾಯಿಂಟ್ಗಳಿಗೆ ಭೇಟಿ ನೀಡಿದ ಮಾಹಿತಿಯ ಗೂಗಲ್ ಮ್ಯಾಪ್ನಲ್ಲಿ ಮಾಹಿತಿ ಸಂಗ್ರಹವಾಗುವುದಲ್ಲದೆ, ಭೇಟಿ ನೀಡಿದ ದಿನಾಂಕ ಮತ್ತು ಸಮಯ ನಮೂದಾಗುತ್ತದೆ. ಈ ಮಾಹಿತಿಯನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡಲು ಸಾಧ್ಯವಿಲ್ಲ.
ಇ-ಬೀಟ್ ವ್ಯವಸ್ಥೆಗೆ `ಸುಬಾಹು’ ಎಂದು ಹೆಸರಿಟ್ಟಿದ್ದು ಇದೊಂದು ಅಂಡ್ರಾಯ್ಡ್ ತಂತ್ರಾಂಶವಾಗಿರುತ್ತದೆ.
ಈ ತಂತ್ರಾಂಶವು ಗೂಗಲ್ ಪ್ಲೇಸ್ಟೋರ್ನಲ್ಲಿ ಲಭ್ಯವಿರುತ್ತದೆ.
ಸುಬಾಹು ರೆಸಿಡೆಂಟ್-ಸಾರ್ವಜನಿಕರು ಈ ಆಪ್ನ್ನು ಬಳಸಿಕೊಂಡು ಲಾಕಡ್ ಹೌಸ್ ಮಾಹಿತಿಯನ್ನು ನೀಡಬಹುದಾಗಿರುತ್ತದೆ. ಅಂದರೆ ಸಾರ್ವಜನಿಕರು ಈ ಆಫ್ನ್ನು ಬಳಸಿಕೊಂಡು ತಾವು ವಾಸವಿರುವ ಮನೆಯ ಬೀಗ ಹಾಕಿ ಹೊರಗಡೆ ಹೋಗುವ ಸಂದರ್ಭದಲ್ಲಿ ಈ ರೆಸಿಡೆಂಟ್ ತಂತ್ರಾಂಶದ ಮುಖಾಂತರ ಅದು ಕೇಳುವಂತಹ ಮಾಹಿತಿಯನ್ನು ಅದರಲ್ಲಿ ಭರ್ತಿ ಮಾಡಿದಾಗ ಅದರ ಮಾಹಿತಿಯ ಸಂಬಂಧಪಟ್ಟ ಪೊಲೀಸ್ ಠಾಣೆಯ ಅಡ್ಮೀನ್ರವರಿಗೆ ರವಾನೆಯಾಗುತ್ತದೆ.
ಇದರಿಂದ ಠಾಣಾ ಸುಭಾಹು ಅಡ್ಮೀನ್ರವರು ರಾತ್ರಿ ಗಸ್ತಿಗೆ ಸಿಬ್ಬಂದಿಯನ್ನು ನೇಮಿಸುವಾಗ ಲಾಕಡ್ ಹೌಸ್ ಮನೆಗಳ ಮಾಹಿತಿಯನ್ನು ಸಂಬಂಧಿಸಿದ ಬೀಟ್ ಸಿಬ್ಬಂದಿಗೆ ತಂತ್ರಾಂಶದ ಮುಖಾಂತರ ನೀಡುತ್ತಾರೆ. ಇದರಿಂದ ಲಾಕಡ್ ಹೌಸ್ ಮನೆಗಳನ್ನು ಹಗಲು ಮತ್ತು ರಾತ್ರಿ ಸಮಯದಲ್ಲಿ ಗಮನಿಸಲು ಅನುಕೂಲವಾಗುತ್ತದೆ.