ಜಗಳೂರು, ಫೆ.1- ತಾಲ್ಲೂಕಿನ 22 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ದಿನಾಂಕ ನಿಗದಿ ಪಡಿಸಿ, ಚುನಾವಾಣಾಧಿ ಕಾರಿಗಳನ್ನು ನೇಮಕ ಮಾಡಲಾಗಿದೆ.
ದೇವಿಕೆರೆ ಗ್ರಾ.ಪಂ ಫೆ.6, ಅಣಬೂರು, ತೋರ ಣಗಟ್ಟೆ, ಕೆಚ್ಚೇನಹಳ್ಳಿ, ಹಿರೇಮಲ್ಲನಹೊಳೆ, ಬಸವನ ಕೋಟೆ, ಪಲ್ಲಾಗಟ್ಟೆ, ಫೆ.8 ಹಾಲೇಕಲ್ಲು, ಕ್ಯಾಸನ ಹಳ್ಳಿ, ಬಿದರಕೆರೆ, ದಿದ್ದಿಗೆ, ಹೊಸಕೆರೆ, ಮುಸ್ಟೂರು, ಕಲ್ಲೇದೇವರಪುರ, ಸೊಕ್ಕೆ, ಬಿಳಿಚೋಡು, ಫೆ.9 ಬಿಸ್ತುವಳ್ಳಿ, ಹನುಮಂತಾಪುರ, ಅಸಗೋಡು, ಗುರು ಸಿದ್ದಾಪುರ, ದೊಣ್ಣೆಹಳ್ಳಿ, ಫೆ.10 ಗುತ್ತಿದುರ್ಗ ಗ್ರಾಮ ಪಂಚಾಯಿತಿಗಳಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ನಿಗದಿತ ದಿನಾಂಕಗಳಂದು ಚುನಾವಣೆ ನಡೆಯಲಿವೆ.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾ ಸಲು, ಪಲ್ಲಾಗಟ್ಟೆ, ಬಿಳಿಚೋಡು, ತೋಟಗಾರಿಕೆ ಸಹಾಯಕ ನಿರ್ದೇಶಕ ವೆಂಕಟೇಶ್ ಮೂರ್ತಿ, ಸೊಕ್ಕೆ, ಬಸವನಕೋಟೆ, ತಾ.ಪಂ ಇಒ ಮಲ್ಲಾ ನಾಯ್ಕ, ದೊಣ್ಣೆಹಳ್ಳಿ, ಕಲ್ಲದೇವರಪುರ, ಬಿಇಒ ವೆಂಕಟೇಶ್, ಮುಸ್ಟೂರು, ಹಿರೇಮಲ್ಲನಹೊಳೆ, ಪಂಚಾಯತ್ ರಾಜ್ ಇಲಾಖೆ ಉಪವಿಭಾಗ ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವಕುಮಾರ್, ಹೊಸಕೆರೆ, ಗುರುಸಿದ್ದಾಪುರ ಲೋ ಕೋಪಯೋಗಿ, ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ಕಾರ್ಯಪಾಲಕ ಅಭಿಯಂತರರು ರುದ್ರಪ್ಪ, ದಿದ್ದಿಗೆ, ಅಸಗೋಡು, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವೆ ಇಲಾಖೆ ಸಹಾಯಕ ನಿರ್ದೇಶಕ ಲಿಂಗರಾಜ್, ದೇವಿಕೆರೆ, ಗುತ್ತಿದುರ್ಗ ತಹಶೀಲ್ದಾರ್ ಡಾ.ನಾಗವೇಣಿ, ಬಿಸ್ತುವಳ್ಳಿ, ಬಿದರಕೆರೆ, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್, ಕೆಚ್ಚೇನಹಳ್ಳಿ, ಕ್ಯಾಸೇನಹಳ್ಳಿ ಎಪಿಎಂಸಿ ಕಾರ್ಯದರ್ಶಿ ಯೊಗೇಶ್, ಹಾಲೇಕಲ್ಲು, ತೋರಣಗಟ್ಟೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬೀರೇಂದ್ರ, ಅಣಬೂರು, ಹನುಮಂತಾಪುರ ಗ್ರಾಮ ಪಂಚಾಯಿತಿಗಳಿಗೆ ಗೊತ್ತುಪಡಿಸಿದ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.