ಹೊನ್ನಾಳಿಯಲ್ಲಿ ವೀರಶೈವ ಪುರೋಹಿತ ಮಹಾಸಭಾದಿಂದ ವಿಚಾರ ಸಂಕಿರಣ

ಇಂದಿನಿಂದ ಮೂರು ದಿನ ನಡೆಯುವ ಕಾರ್ಯಕ್ರಮದಲ್ಲಿ ವೀರಶೈವ ಷೋಡಶ ಸಂಸ್ಕಾರಗಳ ಬಗ್ಗೆ ವಿಚಾರ ಸಂಕಿರಣ, ಧರ್ಮ ಸಭೆ, ಜಾತಕ ಕರ್ಮ, ನಾಮಕರಣ ಮತ್ತು ಡೋಲಾರೋಹಣ,  ಷೋಡಶ ಸಂಸ್ಕಾರಗಳಿಗೆ ಮೂಹೂರ್ತಗಳು ಎಂಬ ವಿಷಯಗಳ ಮೇಲೆ ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮಗಳು ಏರ್ಪಾಡಾಗಿವೆ.

ಹೊನ್ನಾಳಿ, ಫೆ.1- ಅಖಿಲ ಕರ್ನಾಟಕ ವೀರಶೈವ ಪುರೋಹಿತ ಮಹಾಸಭಾ ವತಿ ಯಿಂದ ಹೊನ್ನಾಳಿ ಹಿರೇಕಲ್ಮಠದಲ್ಲಿ ಪ್ರಥಮ ಅಧಿವೇಶನ ಹಾಗೂ ವೀರಶೈವ ಷೋಡಶ ಸಂಸ್ಕಾರಗಳ ಬಗ್ಗೆ ವಿಚಾರ ಸಂಕಿರಣ ಭಾಗ-1 ಕಾರ್ಯಕ್ರಮವನ್ನು  ನಾಳೆ ದಿನಾಂಕ 2 ರಿಂದ  ಮೂರು ದಿನ ಹಮ್ಮಿಕೊಳ್ಳಲಾಗಿದೆ ಎಂದು ಮಹಾಸಭಾದ ರಾಜ್ಯ ನಿರ್ದೇಶಕ ಬೆನಕಯ್ಯ ಶಾಸ್ತ್ರಿ ಹೇಳಿದರು.

ಹಿರೇಕಲ್ಮಠದಲ್ಲಿ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಸಮ್ಮುಖ ದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ನಾಳೆ ಮಂಗಳವಾರ ಬೆಳಿಗ್ಗೆ 8 ಕ್ಕೆ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಹಿರೇಕಲ್ಮಠ ದವರೆಗೆ ಪ್ರಥಮ ಅಧಿವೇಶನದ ಮೆರವಣಿಗೆ ನಡೆಯುವುದು. ಬೆಳಿಗ್ಗೆ 10 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭದ ಸಾನಿಧ್ಯವನ್ನು ಡಾ.ಒಡೆಯರ್ ಚನ್ನಮಲ್ಲಿ ಕಾರ್ಜುನ ಸ್ವಾಮೀಜಿ ವಹಿಸುವರು. ಹೊಟ್ಯಾ ಪುರ ಮಠದ ಗಿರಿಸಿದ್ದೇಶ್ವರ ಸ್ವಾಮೀಜಿ, ರಾಂಪುರ ಮಠದ ಸದ್ಗುರು ಶಿವಕುಮಾರ ಹಾಲಸ್ವಾಮಿಗಳು ನೇತೃತ್ವ ವಹಿಸುವರು. ಅಖಿಲ ಕರ್ನಾಟಕ ವೀರಶೈವ ಪುರೋಹಿತ ಮಹಾಸಭಾ ರಾಜ್ಯಾಧ್ಯಕ್ಷ ಚನ್ನೇಶ ಶಾಸ್ತ್ರಿ ಮಠದ ಅಧ್ಯಕ್ಷತೆ ವಹಿಸುವರು.

ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಸಮಾರಂಭ ಉದ್ಘಾಟಿಸಲಿದ್ದು, ಮಾಜಿ ಶಾಸಕ ಡಿ.ಜಿ.ಶಾಂತನಗೌಡ, ರಾಜ್ಯ ಸರ್ಕಾರದ ಕೊಳಗೇರಿ ಅಭಿವೃದ್ಧಿ ಮಂಡಳಿ ನಿರ್ದೇಶಕಿ ಗೀತಾ ರವೀಂದ್ರ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ಚಿದಾನಂದಪ್ಪ, ಹಿರಿಯ ಚಲನಚಿತ್ರ ನಟ ದೊಡ್ಡಣ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಮಧ್ಯಾಹ್ನ 2.30 ರಿಂದ ಸಂಜೆ 5.30ರವರೆಗೆ ವೀರಶೈವ ಷೋಡಶ ಸಂಸ್ಕಾರಗಳ ಬಗ್ಗೆ ವಿಚಾರ ಸಂಕಿರಣ ಭಾಗ-1 ಕಾರ್ಯಕ್ರಮದಲ್ಲಿ §ಗರ್ಭದಾನ¬ ವಿಷಯ ಕುರಿತು ತುಮಕೂರಿನ ಕೆ.ಎಸ್.ವೀರಪ್ಪದೇವರು, §ಪುಂಸವನ¬ ವಿಷಯ ಕುರಿತು ಹಿರೇಕೆರೂರು ಚನ್ನೇಶ ಶಾಸ್ತ್ರಿ ಮಠದ ಹಾಗು §ಸೀಮಂತೋನ್ನಯನ¬ (ಗರ್ಭಲಿಂಗಧಾರಣೆ) ವಿಷಯದ ಮೇಲೆ ಕಡೂರು ತಾಲ್ಲೂಕು ಯಗಟಿ ಶಿವಲಿಂಗಸ್ವಾಮಿ ವಿಚಾರ ಮಂಡಿಸಲಿದ್ದಾರೆ. ಸಂಜೆ 6 ಗಂಟೆಗೆ ಹೊನ್ನಾಳಿ ಅಭಿನೇತ್ರಿ ನಾಟ್ಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ. 

ಫೆ.3 ರ ಬುಧವಾರ ಬೆಳಿಗ್ಗೆ 9.30 ಕ್ಕೆ ಧರ್ಮಸಭೆ ನಡೆದು, ಜಾತಕ ಕರ್ಮ, ನಾಮಕರಣ ಮತ್ತು ಡೋಲಾರೋಹಣ ಹಾಗೂ ಷೋಡಶ ಸಂಸ್ಕಾರಗಳಿಗೆ ಮೂಹೂರ್ತಗಳು ಎಂಬ ವಿಷಯಗಳ ಮೇಲೆ ಕ್ರಮವಾಗಿ ಶಿವಲಿಂಗಸ್ವಾಮಿ, ದೇವರಾಜಶಾಸ್ತ್ರಿ, ಚಂದ್ರಶೇಖರ ಶಾಸ್ತ್ರಿ ವಿಚಾರ ಮಂಡಿಸಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಉಪನಿಷ್ಕ್ರಮಣ, ಅನ್ನಪ್ರಾಶನ, ಚೌಲ ಪ್ರಯೋಗದ ಬಗ್ಗೆ ಕ್ರಮವಾಗಿ ಚನ್ನೇಶ ಶಾಸ್ತ್ರಿ ಮಠದ, ಪುಟ್ಟಯ್ಯ ಶಾಸ್ತ್ರಿ, ಬಸವರಾಜ ಶಾಸ್ತ್ರಿ ಮಾತನಾಡಲಿದ್ದಾರೆ. 

ದಿನಾಂಕ 4ರ ಗುರುವಾರ ಬೆಳಿಗ್ಗೆ 9ಕ್ಕೆ ಸಮಾರೋಪ ಸಮಾರಂಭ ಜರುಗುವುದು. ಈ ಸಂದರ್ಭದಲ್ಲಿ ಎಂ.ಎಸ್. ಶಾಸ್ತ್ರಿ ಹೊಳೆಮಠ, ಅನ್ನದಾನಯ್ಯ ಶಾಸ್ತ್ರಿ, ಕಳಕಯ್ಯ ಶಾಸ್ತ್ರಿ, ಎಚ್.ಎಂ. ಉಮೇಶ್ ಉಪಸ್ಥಿತರಿದ್ದರು.

 

error: Content is protected !!