ಮಲೇಬೆನ್ನೂರಿನ ನೀರಾವರಿ ನಿಗಮದ ಕಚೇರಿ ಸ್ಥಳಾಂತರಕ್ಕೆ ವಿರೋಧ

ಮಲೇಬೆನ್ನೂರು, ಜ.30- ಪಟ್ಟಣದಲ್ಲಿರುವ ಕರ್ನಾಟಕ ನೀರಾವರಿ ನಿಗಮದ 3ನೇ ವಿಭಾಗೀಯ (ಭದ್ರಾ ನಾಲಾ ನಂ.3) ಕಚೇರಿಯನ್ನು ಯಾವುದೇ ಕಾರಣಕ್ಕೂ ಹೊನ್ನಾಳಿಗೆ ಸ್ಥಳಾಂತರ ಮಾಡಬಾರದೆಂದು ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಹೊಳೆಸಿರಿಗೆರೆಯ ಪಾಲಾಕ್ಷಪ್ಪ ಆಗ್ರಹಿಸಿದ್ದಾರೆ.

ಕಳೆದ 40 ವರ್ಷಗಳಿಂದ ಇಲ್ಲಿಯೇ ಕಾರ್ಯನಿರ್ವಹಿಸುತ್ತಿರುವ ಈ ಕಚೇರಿಯನ್ನು ಸ್ಥಳಾಂತರಿಸಲು ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಮೇಲೆ ಒತ್ತಡ ಹೇರಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರು ಪತ್ರ ವ್ಯವಹಾರ ಮಾಡಿದ್ದಾರೆಂದು ಅವರು ಆರೋಪಿಸಿದ್ದಾರೆ.

ಹಾಲಿ ಕಾರ್ಯನಿರ್ವಹಿಸುತ್ತಿರುವ ಬಸವಾಪಟ್ಟಣ ಉಪವಿಭಾಗ ಸಾಸ್ವೇಹಳ್ಳಿ ಉಪವಿಭಾಗಕ್ಕೆ ಸೇರಿಸಿದರೆ, ಮಲೇಬೆನ್ನೂರು ಹೋಬಳಿಯ ಕುಣೆಬೆಳಕೆರೆ, ನಿಟ್ಟೂರು, ಕುಂಬಳೂರು, ಹಾಲಿವಾಣ, ಹರಳಹಳ್ಳಿ ಮತ್ತಿತರೆ ಹಳ್ಳಿಗಳ ರೈತರಿಗೆ ತೊಂದರೆ ಆಗಲಿದೆ. ಈ ಬಗ್ಗೆ ಹರಿಹರ ತಾಲ್ಲೂಕಿನ ಜನಪ್ರತಿನಿಧಿಗಳು ರೈತರು ಹೋರಾಟಕ್ಕೆ ಸಜ್ಜಾಗಬೇಕೆಂದು ಪಾಲಾಕ್ಷಪ್ಪ ಮನವಿ ಮಾಡಿದ್ದಾರೆ.

error: Content is protected !!