ದಾವಣಗೆರೆಯಲ್ಲಿ ರೈಲ್ವೆ ಮ್ಯೂಸಿಯಂ ಸ್ಥಾಪನೆ : ಕೇಂದ್ರ ಸಚಿವರಿಗೆ ಮನವಿ

ದಾವಣಗೆರೆ, ಜ.10- ನಗರದಲ್ಲಿ ರೈಲ್ವೆ ಮ್ಯೂಸಿಯಂ ಸ್ಥಾಪನೆ ಮಾಡಲು 2021-22ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಅಗತ್ಯ ಅನುದಾನ ಮೀಸಲಿಡುವಂತೆ ಸಂಸದ ಜಿ.ಎಂ. ಸಿದ್ದೇಶ್ವರ ಅವರು ಕೇಂದ್ರ ರೈಲ್ವೆ ಸಚಿವ ಪಿಯೂಷ್‌ ಗೋಯಲ್‌ ಅವರಿಗೆ ಹಾಗೂ ರೈಲ್ವೆ ಮಂಡಳಿ ಅಧ್ಯಕ್ಷ ಸನೀತ್‌ ಶರ್ಮಾ ಅವರಿಗೆ ಮನವಿ ಸಲ್ಲಿಸಿದ್ದಾರೆ.

ದಾವಣಗೆರೆಯಲ್ಲಿ ರೈಲ್ವೆ ಮ್ಯೂಸಿಯಂ ಸ್ಥಾಪನೆ ಮಾಡಲು ಅಗತ್ಯವಾದ ಜಾಗ ಲಭ್ಯವಿದ್ದು, ಹೊಸ ರೈಲ್ವೆ ನಿಲ್ದಾಣ ಕೂಡ ಸಿದ್ದಗೊಳ್ಳುತ್ತಿದೆ. ಮ್ಯೂಸಿಯಂ ಮಾಡಿದರೆ ನಗರಕ್ಕೆ ಮತ್ತಷ್ಟು ಮೆರಗು ಸಿಗಲಿದೆ ಎಂದು ಮನವಿಯಲ್ಲಿ ಸಿದ್ದೇಶ್ವರ ತಿಳಿಸಿದ್ದಾರೆ.

ಹರಿಹರ ನಗರ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವುದು, ತೋಳಹುಣಸೆ ಬಳಿ ಸಬ್‌ ವೇ ನಿರ್ಮಾಣ, ಹೊಸಪೇಟೆ-ಕೊಟ್ಟೂರು ಪ್ಯಾಸೆಂಜರ್‌ ರೈಲನ್ನು ಅರಸೀಕೆರೆ, ಚಿಕ್ಕಮಗಳೂರುವರೆಗೆ ವಿಸ್ತರಿಸುವುದು, ವಾರದಲ್ಲಿ ಮೂರು ಬಾರಿ ದಾವಣಗೆರೆ ಮಾರ್ಗವಾಗಿ ಯಶವಂತಪುರ-ಪುಣೆಗೆ ಹೊಸ ರೈಲು ಓಡಿಸುವುದು ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಸಂಸದರು ಮನವಿ ಮಾಡಿಕೊಂಡಿದ್ದಾರೆ.

error: Content is protected !!