ಕರ್ನಾಟಕ ಕ್ರೀಡಾ ಪ್ರಾಧಿಕಾರ : ಅರ್ಜಿ

ದಾವಣಗೆರೆ,  ಮಾ. 23 – ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ 14 ಹಿರಿಯ ಕ್ರೀಡಾ ವಸತಿ ನಿಲಯದ ಕ್ರೀಡಾ ಪಟುಗಳಿಗೆ ಫಿಟ್ನೆಸ್ ತರಬೇತಿ ನೀಡುವ ಸಲುವಾಗಿ 14 ಫಿಟ್ನೆಸ್ ತರಬೇತುದಾರರ ಸೇವೆ ಪಡೆಯಲು   ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಅರ್ಹ ಅಭ್ಯರ್ಥಿಗಳು ಏಪ್ರಿಲ್ 15ರ ಸಂಜೆ 4 ಗಂಟೆಯೊಳಗೆ ನೃಪತುಂಗ ರಸ್ತೆ,  ರಾಜ್ಯ ಯುವ ಕೇಂದ್ರ, ಕರ್ನಾಟಕ ಕ್ರೀಡಾ ಪ್ರಾಧಿಕಾರದ ಮಹಾ ನಿರ್ದೇಶಕರು, ಬೆಂಗಳೂರು ಇವರಿಗೆ ಸಲ್ಲಿಸಬೇಕು. ಅರ್ಜಿ ನಮೂನೆ ಮತ್ತು ಹೆಚ್ಚಿನ ಮಾಹಿತಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವೆಬ್‍ಸೈಟ್ dyes.karnataka.gov.in ನಲ್ಲಿ ಪಡೆಯಬಹುದು.

error: Content is protected !!