ಕೆಎಸ್ಆರ್‌ಟಿಸಿ ಬಸ್ ನಿರ್ವಾಹಕನಿಗೆ ಮಸಿ ಬಳೆದು, ಹಲ್ಲೆ ಮಾಡಿರುವುದನ್ನು ಖಂಡಿಸಿ ವಾಟಾಳ್ ನಾಗರಾಜ್ ಅವರು ಇಂದು ಕರೆದಿರುವ ಕರ್ನಾಟಕ ಬಂದ್‌ಗೆ ಬೆಂಬಲಿಸಿ ಪ್ರತಿಭಟನಾ ಮೆರವಣಿಗೆ ನಡೆಸಿ ಮನವಿ ಅರ್ಪಿಸಲಾಗುವುದು ಎಂದು ರೈತ ಸಂಘ ಹಾಗೂ ಕನ್ನಡ ಪರ ಸಂಘಟನೆಗಳ ನಿರ್ಣಯವನ್ನು ರವೀಂದ್ರಗೌಡ ಪಾಟೀಲ ತಿಳಿಸಿದ್ದಾರೆ.
ಎಸ್ಸೆಸ್ಸೆಲ್ಸಿ ಪರೀಕ್ಷೆ ಹಾಗೂ ಪ್ರಸಿದ್ದ ವಾಣಿಜ್ಯ ನಗರದ ನಾಗರಿಕರಿಗೆ ಆಗುವ ತೊಂದರೆ ಗಮನದಲ್ಲಿರಿಸಿಕೊಂಡು ಪ್ರತಿಭಟನೆ ಮೂಲಕ ಕರ್ನಾಟಕ ಬಂದ್‌ಗೆ ಸಾಂಕೇತಿಕ ಬೆಂಬಲ ನೀಡಲಾಗುವುದು ಎಂದು ರವಿ ಪಾಟೀಲ ತಿಳಿಸಿದರು. ಇಂದು ಬೆಳಿಗ್ಗೆ 11ಕ್ಕೆ ಕೆಇಬಿ ಗಣೇಶ ದೇವಸ್ಥಾನದಿಂದ ಹೊರಡುವ ಮೆರವಣಿಗೆಯು ಬಸ್ ಸ್ಟ್ಯಾಂಡ್ ಬಳಿ ರಸ್ತಾ ರೋಖೊ ನಡೆಸಿ ಅಲ್ಲಿ ತಹಶೀಲ್ದಾರ್‌ರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವದು ಎಂದು ಅವರು ಹೇಳಿದರು.