ದಾವಣಗೆರೆ, ಮಾ.21- ಎಸ್.ಎಸ್. ನಾರಾಯಣ ಹೆಲ್ತ್ ಸೆಂಟರ್ ಹಾಗೂ ಅಭಿ ಕಾಟನ್ ಸಹಯೋಗದಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಜನ್ಮ ದಿನದ ಅಂಗವಾಗಿ ನಾಳೆ ದಿನಾಂಕ 22ರ ಶನಿವಾರ ಉಚಿತ ಹೃದಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ದೂಡಾ ಸದಸ್ಯೆ ವಾಣಿ ಬಕ್ಕೇಶ್ ತಿಳಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿರಕ್ತ ಮಠದಲ್ಲಿ ನಾಳೆ ಶನಿವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆ ವರೆಗೆ ನಡೆಯುವ ಈ ಶಿಬಿರವನ್ನು ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟಿಸಲಿದ್ದಾರೆ. ಶ್ರೀ ಬಸವಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಭಿ ಕಾಟನ್ಸ್ ಮಾಲೀಕ ಎನ್. ಬಕ್ಕೇಶ್, ಡೋಲಿ ಚಂದ್ರು, ಕೊಟ್ರೇಶ್ ಕಾರಡಗಿ, ಮಹಾಂತೇಶ್ ಕಾರಡಗಿ ಉಪಸ್ಥಿತರಿದ್ದರು.