ದಾವಣಗೆರೆ, ಮಾ.20- ದೊಣೆಹಳ್ಳಿ ಶರಣ ಬಸವೇಶ್ವರ ದಾಸೋಹ ಮಠದ ವತಿಯಿಂದ ನಾಡಿದ್ದು ದಿನಾಂಕ 22 ಮತ್ತು 23ರಂದು ಹಳ್ಳಿಗಾಡಿನ ಜನರಿಗಾಗಿ ಮಠದಲ್ಲಿ ಉಚಿತ ದಂತ ಪಂಕ್ತಿ ಜೋಡಣಾ ಶಿಬಿರ ನಡೆಯಲಿದೆ ಎಂದು ಶಿಬಿರದ ಸಂಯೋಜಕರೂ, ಶ್ರೀ ಮಠದ ಸಂಚಾಲಕರೂ ಆದ ಹಿರಿಯ ಪತ್ರಕರ್ತ ದೊಣೆಹಳ್ಳಿ ಗುರುಮೂರ್ತಿ ತಿಳಿಸಿದ್ದಾರೆ.
ದಿನಾಂಕ 23ರ ಭಾನುವಾರ ಮಧ್ಯಾಹ್ನ 1 ಗಂಟೆಗೆ ದಂತಪಂಕ್ತಿ ವಿತರಣಾ ಸಮಾರಂಭ ನಡೆಯಲಿದ್ದು, ಶಾಸಕ ಬಿ. ದೇವೇಂದ್ರಪ್ಪ ಅಧ್ಯಕ್ಷತೆ ವಹಿಸುವರು.
ಚಿತ್ರದುರ್ಗ ಮುರುಘಾಮಠದ ಉಸ್ತುವಾರಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.
ಬೆಂಗಳೂರಿನ ಸರ್ಕಾರಿ ದಂತ ವೈದ್ಯಕೀಯ ಮಹಾವಿದ್ಯಾಲಯದ 150ಕ್ಕೂ ಅಧಿಕ ವೈದ್ಯರು ಮತ್ತು ಸಿಬ್ಬಂದಿ ಭಾಗವಹಿಸಲಿದ್ದು, ದಂತ ಪಂಕ್ತಿ ಪಡೆಯಲು ಇಚ್ಛಿಸುವವರು ದಿನಾಂಕ 22ರ ಶನಿವಾರ ಬೆಳಗ್ಗೆ ಮಠದಲ್ಲಿ ಹಾಜರಿರಬೇಕು.ದೂರದಿಂದ ಆಗಮಿಸುವ ದಂತ ಪಂಕ್ತಿ ಫಲಾನುಭವಿಗಳಿಗೆ ಶ್ರೀಮಠದಲ್ಲೇ ಊಟ-ವಸತಿ ಏರ್ಪಡಿಸಲಾಗಿದೆ.