ದಾವಣಗೆರೆ, ಮಾ.18- ಅಪ್ರಾಪ್ತ ವಾಹನ ಚಲಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಹನ ಮಾಲೀಕರಿಗೆ 1ನೇ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು 25 ಸಾವಿರ ದಂಡ, ಒಂದು ದಿನ ಸಾದಾ ಸಜೆ ಹಾಗೂ 1 ವರ್ಷ ವಾಹನ ನೋಂದಣಿಯನ್ನು ರದ್ದು ಪಡಿಸಿದೆ.
ನಗರದ ಹೊಂಡದ ರಸ್ತೆಯ ಸಮೀಪ ಫೆ.17ರಂದು ಬಸವನಗರ ಪೊಲೀಸ್ ಠಾಣೆಯ ಪಿಐ ಎಂ.ನಂಜುಂಡಸ್ವಾಮಿ ಮತ್ತು ಸಿಬ್ಬಂದಿ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಬಾಲಕ ಸ್ಕೂಟಿ ಚಲಾಯಿಸಿರುವುದು ಬೆಳಕಿಗೆ ಬಂದಿದೆ.
ವಾಹನ ಮಾಲೀಕರ ವಿರುದ್ಧ ಬಸವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೊಂಡಾ ಆಕ್ಟಿವಾ ಸ್ಕೂಟಿಯನ್ನು ಜಪ್ತಿ ಮಾಡುವ ಜತೆಗೆ ಮಾಲೀಕರ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಈ ಕುರಿತು ಅಪ್ರಾಪ್ತನಿಗೆ 25 ವರ್ಷ ತುಂಬುವವರೆಗೂ ಚಾಲನಾ ಪರವಾನಿಗೆಯನ್ನು ನೀಡದಂತೆ ನ್ಯಾಯಾಧೀಶರು ಶಿಕ್ಷೆ ವಿಧಿಸಿ ತೀರ್ಪು ನೀಡಿ ಆದೇಶಿಸಿದ್ದಾರೆ.