ರಾಣೇಬೆನ್ನೂರು ನಗರಸಭೆ ಸಾಮಾನ್ಯ ಸಭೆಗೆ ಹೈಕೋರ್ಟ್ ತಡೆಯಾಜ್ಞೆ

ರಾಣೇಬೆನ್ನೂರು, ಮಾ.14- ಇಂದು ಸಂಜೆ 4 ಗಂಟೆಗೆ ನಡೆಯಬೇಕಿದ್ದ ಇಲ್ಲಿನ ನಗರಸಭೆಯ ಮುಂದೂಡಿದ ಸರ್ವ ಸದಸ್ಯರ ಸಾಮಾನ್ಯ ಸಭೆಗೆ ಧಾರವಾಡ ಉಚ್ಛನ್ಯಾಯಾಲಯ ತಡೆಯಾಜ್ಞೆ ನೀಡಿದ್ದ ರಿಂದ  ಸಭೆಯನ್ನು ರದ್ದುಗೊಳಿಸಲಾಗಿದೆ ಎಂದು ಪೌರಾಯುಕ್ತರು ತಿಳಿಸಿದ್ದಾರೆ.

ಅಧ್ಯಕ್ಷ-ಉಪಾದ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಬಿಜೆಪಿಯಲ್ಲಿನ ಒಡಕಿನಿಂದಾಗಿ ಅಧಿಕೃತ ಅಭ್ಯರ್ಥಿಗಳು ಸೋಲುಂಡು, ಕಾಂಗ್ರೆಸ್ ಅಧ್ಯಕ್ಷ ಸ್ಥಾನ, ಬಿಜೆಪಿಯ ಒಂದು ಗುಂಪು ಉಪಾಧ್ಯಕ್ಷ ಸ್ಥಾನ ಪಡೆದಿದ್ದವು. ಅಂದಿನ ಒಡಕು ಹಾಗೇ ಉಳಿದಿದ್ದು ಸಭೆ ಮುಂದೂಡುವ, ಮತ್ತಿತರೆ ಚಟುವಟಿಕೆಗಳು ನಡೆಯುತ್ತಿವೆ ಎಂದು ತಿಳಿದುಬಂದಿದೆ.

ಬಜೆಟ್ ಅಂಗೀಕರಿಸಿದ ದಿನವೇ 100 ವಿಷಯಗಳ ಸಾಮಾನ್ಯ ಸಭೆಯನ್ನು ಕರೆಯಲಾಗಿತ್ತು, ಆದರೆ ಅಂದಿನ ಸಭೆಯಲ್ಲಿ ಸ್ಥಾಯಿ ಸಮಿತಿ ರಚಿಸುವಲ್ಲಿ ಉಂಟಾದ ಭಿನ್ನಮತದಿಂದಾಗಿ ಸಭೆ ಮಂದೂಡುತ್ತಲೇ ಬಂದಿದ್ದು, ಸದಸ್ಯರಲ್ಲಿ ಒಮ್ಮತ ಬರದೇ ಇರುವ ಕಾರಣ,  ನ್ಯಾಯಾಲಯದ ಮೊರೆ ಮುಂತಾದ ಚಟುವಟಿಕೆಗಳು ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ.

error: Content is protected !!